ಕಲಾದಗಿಯ ಗುರುಲಿಂಗೇಶ್ವರ ಪ್ರೌಢ ಶಾಲೆಯಲ್ಲಿ 1999-2000ನೇ ಸಾಲಿನ ವಿದ್ಯಾರ್ಥಿ ಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಿಕ್ಷಣ ತಜ್ಞ ಎಂ.ಜಿ. ದಾಸರ, ನಿವತ್ತ ಮುಖ್ಯಶಿಕ್ಷಕ ಎಂ.ಬಿ. ಹೂಗಾರ, ಹಿರಿಯ ನಿವತ್ತ ಶಿಕ್ಷಕ ಎಸ್.ಎನ್. ಹೂಗಾರ, ಶಿಕ್ಷಕ ಎಚ್.ಎನ್. ನಾಯನೇಗಲಿ ಇತರರಿದ್ದರು. 
ರಾಜ್ಯ

ಗುರುಗಳ ಋಣ ಸ್ಮರಣೆ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ತಜ್ಞ ಎಂ.ಜಿ. ದಾಸರ ಅಭಿಮತ
  • ಗುರುವಂದನಾ ಕಾರ್ಯಕ್ರಮ
ಕಲಾದಗಿ: ಕಣ್ಣಿಗೆ ಕಾಣದ ದೇವರುಗಳಿಗಿಂತ ಕಣ್ಣಿಗೆ ಕಾಣುವ ದೇವರೆಂದರೆ ಗುರುಗಳು. ಅಜ್ಞಾನದಿಂದ ಜ್ಞಾನದತ್ತ, ಅಂಧಕಾರದಿಂದ ಬೆಳಕಿನತ್ತ ಕರೆದೊಯ್ಯುವ ಮಹಾನ್ ವ್ಯಕ್ತಿತ್ವಗಳು ಎಂದು ಶಿಕ್ಷಣ ತಜ್ಞ ಎಂ.ಜಿ. ದಾಸರ ಅಭಿಪ್ರಾಯಪಟ್ಟರು.
ಗ್ರಾಮದ ಗುರುಲಿಂಗೇಶ್ವರ ಪ್ರೌಢ ಶಾಲೆಯಲ್ಲಿ 1999-2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಜ್ಞಾನ, ಮೌಲ್ಯಗಳು ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿದ ಗುರುಗಳನ್ನು 25 ವರ್ಷಗಳ ಬಳಿಕ ಸ್ಮರಿಸಿ ಗೌರವಿಸುತ್ತಿರುವುದು ಹಾಗೂ ಶಾಲೆಯ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿಯ ಕಾರ್ಯ ಎಂದರು.
ನಿವತ್ತ ಮುಖ್ಯಶಿಕ್ಷಕ ಎಂ.ಬಿ. ಹೂಗಾರ ಮಾತನಾಡಿ, ಕಲಿಸಿದ ಗುರುಗಳಿಗೆ ಕತಜ್ಞತೆ ಸಲ್ಲಿಸಲು ದೂರದೂರಿನಿಂದ ಒಂದಾಗಿ ಸೇರಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಅವರ ಸಂಸ್ಕಾರ ಮತ್ತು ಗುರುಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಹಿರಿಯ ನಿವತ್ತ ಶಿಕ್ಷಕ ಎಸ್.ಎನ್. ಹೂಗಾರ, ಶಿಕ್ಷಕ ಎಚ್.ಎನ್. ನಾಯನೇಗಲಿ ಹಾಗೂ ಮುಖ್ಯೋಪಾಧ್ಯಾಯ ಎಸ್.ವಿ. ಲಮಾಣಿ ಮಾತನಾಡಿದರು. ನಿವತ್ತ ಶಿಕ್ಷಕರಾದ ಎಸ್.ವಿ. ಬೆಣ್ಣೂರ, ಶಿರೋಳಕರ, ಬಿ.ಎ. ಬಾಗವಾನ, ಎಲ್.ಆರ್. ಗುದಿಗೆನ್ನವರ, ಎಸ್.ಪಿ. ಹೊಸಮಠ, ಎಂ.ಆರ್. ಘಾಟಿ, ಎಸ್.ಎಂ. ಸೂಳಿಕೇರಿ, ಬಿ.ಎಸ್. ಹೂಗಾರ ಸೇರಿ ಬೋಧಕೇತರ ಸಿಬ್ಬಂದಿ ನಬೀಲಾಲ ಹೆಬ್ಬಾಳಟ್ಟಿ ಮತ್ತು ಎಂ.ಎ್. ಭಜಂತ್ರಿ ಉಪಸ್ಥಿತರಿದ್ದರು.