The grand chariot festival of Bateyarayaswamy
ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಕಳೆದೆರೆಡು ದಿನದಿಂದ ಅಂಕುರಾರ್ಪಣ ಅಷ್ಟಮಿ ಧ್ವಜಾರೋಹಣ ಕಾರ್ಯಕ್ರಮ, ಗರುಡೋತ್ಸವ ಶ್ರೀರಾಮನವಮಿ ಮಂಟಪಪಡಿ ಪೂಜೆ ಗಜೇಂದ್ರ ಮೋಕ್ಷ ನಂತರ ಸೀತಾ ಕಲ್ಯಾಣೋತ್ಸವ ಮಂತ್ರೋಷದೊಂದಿಗೆ ನೆರವೇರಿತು.
ಮಾ.29ರಂದು ಬೆಳಗ್ಗೆ ಅಭಿಷೇಕ, ಪ್ರಾಕಾರೋತ್ಸವ, ಸಂಜೆ ಸೀತಾಲಕ್ಷ್ಮೀಗೆ ವಿಶೇಷ ಅಲಂಕಾರ, ರಾತ್ರಿ ಶಯನೋತ್ಸವ ನೆರವೇರಲಿದೆ. ವಾ.30ರಂದು ಬೆಳಿಗ್ಗೆ ಸುಪ್ರಭಾತಸೇವೆ, ಅವಭೃತ ಸ್ನಾನ, ವಸಂತ ವಾಧವ ಪೂಜೆ ನೆರವೇರಲಿದೆ. ಸಂಜೆ ಹನುಮಂತೋತ್ಸವ ಮೆರವಣಿಗೆ ನಡೆದು ನಂತರ ಧ್ವಜಾವರೋಹಣ ಸರ್ಕಾರಿ ಸೇವೆ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.