ಕೆಂಭಾವಿ ಹಿರೇಮಠದಲ್ಲಿ ಮಾಸಿಕ ಹುಣ್ಣಿಮೆ ಶಿವಾನುಭವ ಗೋಷ್ಠಿ ಹಾಗೂ ಗುರುಪೂರ್ಣಿಮೆ ನಿಮಿತ್ತ ಬುಧವಾರ ಸಂಜೆ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮವನ್ನು ಲಿಂಗನಗೌಡ ಮಾಲಿಪಾಟೀಲ್ ಉದ್ಘಾಟಿಸಿದರು. ಶ್ರೀ ಚನ್ನಬಸವ ಶಿವಾಚಾರ್ಯ, ಶ್ರೀ ಕಾಂತಯ್ಯ ಶಾಸಿö, ಪುರಸಭೆ ಅದ್ಯಕ್ಷೆ ಗಿರಿಜÁ ಕೊಡಗಾನೂರ, ಮಹಾದೇವಿ ಸರ್ಜಾಪುರ, ನಿಂಗನಗೌಡ ದೇಸಾಯಿ, ಡಾ.ಯಂಕನಗೌಡ ಇತರರಿದ್ದರು. 
ರಾಜ್ಯ

ಜೀವನ ಬೆಳಗಲು ಗುರುವಿನ ಕರುಣೆ ಅಗತ್ಯ

ಕೆಂಭಾವಿ: ಜಗತ್ತು ಬೆಳಗಳು ಸೂರ್ಯ ಮತ್ತು ಚಂದ್ರ ಎಷ್ಟು ಅಗತ್ಯವೇ ಹಾಗೆ ನಮ್ಮ ಜೀವನ ಬೆಳಗಲು ಸದ್ಗುರುವಿನ ಕರುಣೆ ಕೂಡ ಅಷ್ಟೇ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಬುಧವಾರ ಸಂಜೆ ಹಮ್ಮಿಕೊಂಡ ಮಾಸಿಕ ಹುಣ್ಣಿಮೆ ಶಿವಾನುಭವ ಗೋಷ್ಠಿ ಹಾಗೂ ಗುರು ಪೂರ್ಣಿಮೆ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶ ವಿವಿಧ ಧರ್ಮಗಳಿಂದ ಕೂಡಿದ ಸಂಪದ್ಭರಿತ ರಾಷ್ಟç. ಭರತ ಭೂಮಿಯಲ್ಲಿ ನೆಲೆಸಿದ ಪ್ರತಿಯೊಬ್ಬರೂ ತಮ್ಮ ತಮ್ಮ ಗುರುಗಳ ಮೇಲೆ ಭಕ್ತಿ ಶ್ರದ್ಧೆ ಇಟ್ಟು ಭಗವಂತನನ್ನು ಆರಾಽಸಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವುದೇ ಈ ನೆಲದ ಮೂಲ ಉದ್ದೇಶವಾಗಿದೆ ಎಂದರು.
ಪ್ರತಿ ತಿಂಗಳು ಶ್ರೀಮಠಲ್ಲಿ ನಡೆಯುವ ಶಿವಾನುಭವ ಗೋಷ್ಠಿ ಭಕ್ತರಿಗೆ ಹೊಸ ಅನುಭವ ನೀಡುತ್ತಿದ್ದು ಈ ಕಾರ್ಯಕ್ರಮ ೧೧ ವರ್ಷ ಪೂರೈಸಿ ೧೨ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ಅತೀವ ಸಂತೋಷ ತಂದಿದೆ ಎಂದರು.
ಪುರಾಣಿಕ ಮಲ್ಲಯ್ಯ ವಡಗೇರಿ ವಿಶೇಷ ಉಪನ್ಯಾಸ ನೀಡಿದರು. ಪೀಠಾಽಪತಿ ಶ್ರೀ ಚನ್ನಬಸವ ಶಿವಾಚಾರ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾಸನೂರ ಚಿಂಚರಕಿ ಮಠದ ಶ್ರೀ ಕಾಂತಯ್ಯ ಶಾಸಿö, ಪುರಸಭೆ ಅಧ್ಯಕ್ಷೆ ಗಿರಿಜಾ ಕೊಡಗಾನೂರ, ಮಹಾದೇವಿ ಸರ್ಜಾಪುರ, ನಿಂಗನಗೌಡ ದೇಸಾಯಿ, ರಮೇಶ ಕೊಡಗಾನೂರ, ಶಿವಪ್ಪ ಕಂಬಾರ, ಚೆಳೆಗಪ್ಪ ಮ್ಯಾಗೇರಿ, ಬಸವರಾಜ, ಯಲ್ಲಾಲಿಂಗ, ಅಬಿಷೇಕ ಪಾಟೀಲ್ ಇದ್ದರು. ಯಮುನೇಶ ಯಾಳಗಿ ಮತ್ತು ಶರಣಕುಮಾರ ಯಾಳಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಯಂಕನಗೌಡ ನಿರೂಪಣೆ ಮಾಡಿದರು.