ಜೇವರ್ಗಿ: ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಉದ್ಯೋಗವಿಲ್ಲದೆ ಕಷ್ಟ ಅನುಭವಿಸುತ್ತಿದೆ. ಹೀಗಾಗಿ ಸರ್ಕಾರಗಳು ಯುವಕರ ಸಮಸ್ಯೆ ಅರ್ಥ ಮಾಡಿಕೊಂಡು, ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಾಗು ಎಂದು ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಭಾಷಾಪಟೇಲ್ ಮಾಲಿಪಾಟೀಲ್ ಯಾಳವಾರ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನು ಸೇವೆ ಸಮಿತಿಯಿಂದ ಕಾನೂನಿನ ಬಗ್ಗೆ ಅರಿವು ಮೂಡಿಸಲಾಯಿತು. ಪ್ರಾಂಶುಪಾಲೆ ಡಾ.ಶಾಂತಾ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂದ ತಾಲೂಕು ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ವಕೀಲರಾದ ರಾಜು ಮುದ್ದಡಗಿ, ಶರಣು ನೆಲೋಗಿ, ದಯಾನಂದ ಕಂದಗಲ, ಅಪ್ಪಾಸಾಬ ಕೋಳಕೂರ, ತ್ರೀವೇಣಿ ಕುರಳಗೇರಾ, ಆರ್.ಬಿ.ಭಂಡಾರಿ ಇತರರಿದ್ದರು. ಶರಣಪ್ಪ ಸ್ವಾಗತಿಸಿದರು. ಭೀಮು ನಿರೂಪಣೆ ಮಾಡಿದರು. ಕುಪೇಂದ್ರ ವಂದಿಸಿದರು.