ದೊಡ್ಡಹನ್ನೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಕೆ ವೆಂಕಟೇಶ್, ಈಶ್ವರೆಗೌಡ, ರೆಹಮದ್ ಜಾನ್ ಬಾಬು, ದೀರ್ಘಶಿ ಶಿವಣ್ಣ, ಬಸವರಾಜ್, ಹೊಲದಪ್ಪ, ಇದ್ದರು
ಬೈಲುಕುಪ್ಪೆ: ರಾಜ್ಯ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುವುದರ ಮೂಲಕ ಬದ್ಧತೆ ಉಳಿಸಿಕೊಂಡಿದೆ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ದೊಡ್ಡ ಹೊನ್ನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ಮೂರು ದಿನಗಳಿಂದ ಗ್ರಾಮೀಣ ಭಾಗದಲ್ಲಿ ನೂರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಂದು ಚಾಲನೆ ನೀಡಲಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರವು ಕೂಡ ಗ್ರಾಮೀಣ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕೂಡ ಸಾಕಷ್ಟು ಅನುದಾನ ನೀಡಿ ತಾಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇವರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತೀನ್ ಕೆ.ವೆಂಕಟೇಶ್,ಮೈಮುಲ್ ನಿರ್ದೇಶಕ ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್,ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಒ ಸುನೀಲ್ ಕುಮಾರ್, ಬಿಇಒ ರವಿ ಪ್ರಸನ್ನ, ಅರಣ್ಯ ಇಲಾಖೆ ಪದ್ಮಶ್ರೀ, ಅಭಿಯಂತರರಾದ ಮಲ್ಲಿಕಾರ್ಜುನ, ಯೋಗಾನಂದ, ಕೃಷ್ಣಮೂರ್ತಿ,ರಕ್ಷಿತ್,ಗುರು ಬಸವ ಆರಾಧ್ಯ, ದಿನೇಶ್,ಸುಗಂಧ ರಾಜ್,ಮುಖಂಡರಾದ ರಾಮಚಂದ್ರ,ರೆಹಮತ್ ಜಾನ್ ಬಾಬು, ಕಾಂಗ್ರೆಸ್ ಮುಖಂಡ ಈಶ್ವರೆ ಗೌಡ, ದೀರ್ಘಶಿ ಶಿವಣ್ಣ, ನವಿಲೂರು ಮಾದೇವ್, ಚೆನ್ನಪ್ಪ, ಪಿಡಿಓ ಕಳಾದ ಬೋರೇಗೌಡ, ರವಿ, ಪರಮೇಶ್ , ಮಂಜು, ಮಂಜೇಶ್, ಮಹೇಶ್ ಕುಮಾರ್, ಜವರೇಗೌಡ, ಶಶಿಕುಮಾರ್, ಹರೀಶ, ಸೇರಿದಂತ್ತೆ ಇತರರಿದ್ದರು.