ಸೇಡಂ ತಾಲೂಕಿನ ಮುಧೋಳದ ಇಂದಿರಾಗಾಂಧಿ ವಸತಿಶಾಲೆಗೆ ಬಿಜೆಪಿ ಟಕದ ನಿಯೋಗ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿತು. ಮಾಜಿ ಸಂಸದ ಡಾ.ಉಮೇಶ ಜಾಧವ್​, ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ರಾಜಕುಮಾರ ಪಾಟೀಲ್​, ಜಿಲ್ಲಾಧ್ಯಕ್ಷ ಅಶೋಕ ಬಗಲಿ ಇತರರಿದ್ದರು. 
ರಾಜ್ಯ

ಮಕ್ಕಳ ಜೀವದ ಜತೆಗೆ ಸರ್ಕಾರ ಚೆಲ್ಲಾಟ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಕುಮಾರ ಪಾಟೀಲ್​ ಆರೋಪ
  • ವಸತಿಶಾಲೆಗೆ ಬಿಜೆಪಿ ನಿಯೋಗ ಭೇಟಿ
ಸೇಡಂ ಮಕ್ಕಳ ಭವಿಷ್ಯದ ಕನಸಿನೊಂದಿಗೆ ಅಧ್ಯಯನಕ್ಕಾಗಿ ವಸತಿಶಾಲೆಗಳಲ್ಲಿ ಮಕ್ಕಳನ್ನು ಪಾಲಕರು ಕಳುಹಿಸಿಕೊಟ್ಟಿರುತ್ತಾರೆ. ಆದರೆ ಸರ್ಕಾರ ಅವರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ದೂರಿದರು.
ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿಶಾಲೆಗೆ ಸೋಮವಾರ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಅವರು, ಕಳಪೆ ಆಹಾರ ಪೂರೈಕೆಯಿಂದ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರು ಮೌನವಹಿಸಿದ್ದಾರೆ. ವಸತಿಶಾಲೆಯಲ್ಲಿ ಮೂಲಸೌಕರ್ಯವಿಲ್ಲ. ಊಟದ ಸಭಾಂಗಣ, ಅಡುಗೆ ಕೋಣೆ ಶುಚಿತ್ವವಾಗಿಲ್ಲ. ಸಾಕಷ್ಟು ಸಮಸ್ಯೆಗಳಿವೆ. ಇಂತಹ ಸ್ಥಿತಿಯಲ್ಲಿ ಮಕ್ಕಳು ಓದುವುದು ಹೇಗೆ ? ಕೂಡಲೇ ೇತ್ರದ ಎಲ್ಲ ವಸತಿಶಾಲೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ್​ ಮಾತನಾಡಿ, ಸಚಿವ ಪ್ರಿಯಾಂಕ್​ ರ್ಖಗೆ ಅವರು ಮಾತನಾಡಿದರೆ ದಲಿತ ಎನ್ನುತ್ತಾರೆ. ಇಲ್ಲಿನ ಶಾಲೆಯಲ್ಲಿ ಬಹುತೇಕ ಮಕ್ಕಳು ದಲಿತ ಸಮುದಾಯದವರೇ ಇದ್ದಾರೆ. ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಪ್ರಮುಖರಾದ ಬಸವರಾಜ ಬೆಣ್ಣೂರ, ಆನಂದ ಕೊರಳ್ಳಿ, ತಿರುಪತಿ ಶಹಾಬಾದಕರ್​, ರಾವೇಂದ್ರ ಮೆಕಾನಿಕ್​, ರವೀಂದ್ರ ಸಜ್ಜನಶೆಟ್ಟಿ, ವಿನೋದ ಸಾಹುಕಾರ, ಶ್ರೀಕಾಂತರೆಡ್ಡಿ, ನಾಗರೆಡ್ಡಿ ಮುಧೋಳ, ಲ್ಮಕಾಂತ ಹೊನ್ನಕೇರಿ, ವಿಜಯಕುಮಾರ ಖೇವಜಿ, ನಾಗಪ್ಪ ಕೊಳ್ಳಿ, ಮಹಾದೇವಪ್ಪ ಗೋಣಿ, ಗೋವಿಂದ ಯಾಕಂಬರಿ, ಡಾ.ವೆಂಕಟರಾವ ಮಿಸ್ಕಿನ್​, ರವಿ ರಾಠೋಡ್​, ರವಿ ಜಾಧವ್​, ಅಶೋಕ ಬೋಯಿನ್​, ಜೈಪ್ರಕಾಶ ರಾಠೋಡ್​, ವಿಷ್ಣು ಊಡಗಿ, ರಾಮು ಕಣೇಕಲ್​, ಭೀಮಶಪ್ಪ ಮುನಕನಪಲ್ಲಿ, ರವಿ ಶೆಟ್ಟಿಹೂಡಾ, ನಾಗು, ಸಾಗರ ಕಲಕಂಭ, ರೇವಣಸಿದ್ದ ಬಿರಾದಾರ ಇತರರಿದ್ದರು.
"

ವಸತಿಶಾಲೆಯ ಶಿಕ್ಷಕರ ಮಧ್ಯೆ ಹೊಂದಾಣಿಕೆ ಕೊರತೆ ಕಂಡು ಬಂದಿದೆ. ಹೀಗಾಗಿ ಎಲ್ಲ ಶಿಕ್ಷಕರನ್ನು ದೂರದ ಸ್ಥಳಕ್ಕೆ ವರ್ಗಾವಣೆ ಮಾಡಿ, ಕಾಯಂ ವಾರ್ಡನ್​, ಪ್ರಾಚಾರ್ಯರ ನೇಮಕ ಮಾಡಬೇಕು.

— > ರಾಜಕುಮಾರ ಪಾಟೀಲ್​ ತೆಲ್ಕೂರ, ಮಾಜಿ ಶಾಸಕ