ಮಳಖೇಡದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳ ಶೆಡ್ ನಿರ್ಮಾಣ ಕಾಮಗಾರಿಗೆ ಕೆಡಿಪಿ ಸದಸ್ಯ ಅಲಿಆಗಾ ಜಾಗಿರದಾರ ಚಾಲನೆ ನೀಡಿದರು. ಬಸವರಾಜ ಪಾಟೀಲ್, ರಾಜಶೇಖರ ಪುರಾಣಿಕ, ದಿನೇಶ ಸಣ್ಣೂರ, ನಾಗರಾಜ ನಂದೂರ ಇತರರಿದ್ದರು.
ಮಳಖೇಡ: ರೈತರ ಸಮಗ್ರ ಕಲ್ಯಾಣ ಹಾಗೂ ಜಾನುವಾರುಗಳ ಹಿತರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಕೃಷಿಕ ಸಮಾಜದ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ಹೇಳಿದರು. ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಾನುವಾರುಗಳ ಶೆಡ್ ನಿರ್ಮಾಣ ಕಾಮಗಾರಿಗೆ ಚಾಲನೆ ಸಮಾರಂಭದಲ್ಲಿ ಮಾತನಾಡಿ, ರೈತರ ಧೀರ್ಕಾಲದ ಸಮಸ್ಯೆಗೆ ಸ್ಪಂದಿಸಿ ಸರ್ಕಾರ ಸುಸಜ್ಜಿತ ಶೆಡ್ ನಿರ್ಮಾಣ ಮಾಡಲು ಮುಂದಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಕೆಡಿಪಿ ಸದಸ್ಯ ಅಲಿಆಗಾ ಜಾಗಿರದಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ಕೌಡಲ್, ಎಇಇ ರಾಕೇಶ ಡಿಗ್ಗಿಕರ್, ಪ್ರಮುಖರಾದ ವೀರಭದ್ರಯ್ಯ, ರಾಜಶೇಖರ ಪುರಾಣಿಕ, ದಿನೇಶ ಸಣ್ಣೂರ, ನಾಗರಾಜ ನಂದೂರ, ದೇವೇಂದ್ರಪ್ಪ ಹಳಿಜೋಳ, ವೀರಣ್ಣ ಸಜ್ಜನಶೆಟ್ಟಿ, ಸುಂದರ ಮಂಗಾ, ಶರಣಯ್ಯ ಸ್ಥಾವರಮಠ, ಮಲ್ಲಪ್ಪ ಆರಬೋಳ, ಅಂಬರೀಷ ಗುಡಿ, ಅಮ್ಜದ್ ಹುಸೇನ್ ಖಾನ್, ಶರಣಪ್ಪ ಗುಡಿ, ಫಯಾಜ್ ಇನಾಮದಾರ, ಮಹ್ಮದ್ ಸಾಧಿಕ್, ಹನ್ನಾನ್ಖಾನ್, ಕೀರ್ತಿಕುಮಾರ ಮಾಳಗಿ ಇತರರಿದ್ದರು.