ಬೈಲಹೊಂಗಲ ಕೆಆರ್​ಸಿಇಎಸ್​ ಎಚ್​.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಡಾ.ವಿಶ್ವನಾಥ ಪಾಟೀಲ, ದೀಪಕ ಸಂಗೊಳ್ಳಿ, ಶಿರೀಷ ತುಡವೇಕರ, ಶೇಖರಗೌಡಾ ಪಾಟೀಲ ಇತರರಿದ್ದರು. 
ರಾಜ್ಯ

ನೊಂದವರಿಗೆ ನ್ಯಾಯ ಒದಗಿಸುವ ಗುರಿ ಇರಲಿ

ಬೈಲಹೊಂಗಲ: ಸಮಾಜದಲ್ಲಿ ನೊಂದ ಕದಾರರಿಗೆ ನ್ಯಾಯ ಒದಗಿಸಿ ಕರ್ತವ್ಯ ಪ್ರಜ್ಞೆ ಮೆರೆಯುವ ಗುರಿ ಇಟ್ಟುಕೊಂಡು ಜನಾನುರಾಗಿಯಾಗಬೇಕೆಂದು
ಕೆಆರ್​ಸಿಇಎಸ್​ ಶಿಣ ಸಂಸ್ಥೆ ಚೇರ್ಮನ್​, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಶಿಣ ಸಂಸ್ಥೆಯ
ಎಚ್​.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ 2025&26ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಅಮಾಯಕರಿಗೆ ಶಿೆ ಆಗದಂತೆ ಎಚ್ಚರ ವಹಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಹಡಪದ ಮಾತನಾಡಿದರು. ಕೆಆರ್​ಸಿ ಶಿಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಉಪ ಸಮಿತಿ ಚೇರ್ಮನ್​ ದೀಪಕ ಸಂಗೊಳ್ಳಿ, ಸಂಸ್ಥೆ ನಿರ್ದೇಶಕ ಶಿರೀಷ ತುಡವೇಕರ, ಶೇಖರಗೌಡ ಪಾಟೀಲ, ಪ್ರಾಂಶುಪಾಲ ಪ್ರಕಾಶ ಪಾಟೀಲ, ಸಹಾಯಕ ಪ್ರಾಧ್ಯಾಪಕಿ ಪದ್ಮಶ್ರೀ ಪಾಟೀಲ, ಪ್ರಾಧ್ಯಾಪಕ ಜೋಸ್​ೆ ಅಂಬ್ರೋಜಿ, ಡಿ.ಜಿ.ನರಗುಂದ, ಐ.ಎಂ.ಹುಣಸೀಕಟ್ಟಿ, ಎಂ.ಎಸ್​.ಪಟ್ಟಣಶೆಟ್ಟಿ, ಶಿವಾನಂದ ಬಳಿಗಾರ, ಪ್ರಾಂಶುಪಾಲ ಪ್ರಕಾಶ ಪಾಟೀಲ ಇತರರಿದ್ದರು.