ಪ್ರಬುದ್ಧ ಭಾರತ ನಿಮಾರ್ಣದ ಗುರಿ India 
ರಾಜ್ಯ

ಪ್ರಬುದ್ಧ ಭಾರತ ನಿಮಾರ್ಣದ ಗುರಿ India

ಬೇತಮಂಗಲ: ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರುವುದು ಸಂಘಟನೆಯ ಬಹುಮುಖ್ಯ ಉದ್ದೇಶವಾಗಿದೆ. ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸಂಘಟನೆಯ ಏಕೈಕ ಅಜೆಂಡಾ ಆಗಿದ್ದು, ಪ್ರತ್ಯೇಕ ಪ್ರಣಾಳಿಕೆ ಅಥವಾ ಬೇರೆ ಯಾವುದೇ ಗುಪ್ತ ಅಜೆಂಡಾಗಳಿಲ್ಲ. ಸಂವಿಧಾನದ ಆಶಯಗಳ ಮೂಲಕ "ಪ್ರಬುದ್ಧ ಭಾರತ'ನಿಮಾರ್ಣ ಗುರಿಯನ್ನು ಸಂಘಟನೆ ಹೊಂದಿದೆ ಎಂದು ಮಹಾತ್ಮಪುಳೆ ಅಕ್ಷರ ಅಕಾಡೆಮಿ ಅಧ್ಯಕ್ಷ ಕೆ.ಸಿ ರಾಜಣ್ಣ ತಿಳಿಸಿದರು.India
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ವಿಚಾರ ವೇದಿಕೆ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ನ್ಯೂಟನ್​ ಪ್ರಶಾಂತ್​, ಹಿರಿಯ ಉಪಾಧ್ಯಕ್ಷರಾಗಿ ವಿ.ಹರೀಶ್​, ಎನ್​.ಮಂಜುನಾಥ್​, ಪ್ರಧಾನ ಕಾರ್ಯದರ್ಶಿಯಾಗಿ ವಿ.ಜಯರಾಮ್​, ಕಾರ್ಯದರ್ಶಿಗಳಾಗಿ ಎಂ. ಮುನೇಶ್​, ಸುಪ್ರೀತ್​, ಎನ್​.ಎಸ್​. ಸುದೀಪ್​, ಖಜಾಂಚಿಯಾಗಿ ಎಂ.ಆರ್​. ಸುನಿಲ್​ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.