ಮುಡಿಗುಂಡ ಆದರ್ಶ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮುಖ್ಯಶಿಕ್ಷಕಿ ಪ್ರಿಯದರ್ಶಿನಿ ಮಾತನಾಡಿದರು. 
ರಾಜ್ಯ

ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡುವುದೇ ಗುರಿ

ಪ್ರಮುಖ ಮುಖ್ಯಾಂಶಗಳು

  • ಮುಡಿಗುಂಡ ಆದರ್ಶ ಸರ್ಕಾರಿ ಶಾಲೆ
  • ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ
ಕೊಳ್ಳೇಗಾಲ: ಸಮೀಪದ ಮುಡಿಗುಂಡ ಆದರ್ಶ ಸರ್ಕಾರಿ ಶಾಲೆ ಮಕ್ಕಳು ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನಗಳಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ ಹೇಳಿದರು.
ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 625 ಕ್ಕೆ 625 ಅಂಕ ಪಡೆದು ರಾಜ್ಯಮಟ್ಟದ ಸಾಧನೆ ಮಾಡಬೇಕು. 4 ವರ್ಷಗಳಲ್ಲಿ ಗುಣಮಟ್ಟದ ಫಲಿತಾಂಶವನ್ನು ಶಾಲೆ ನೀಡಿದೆ. 2 ಬಾರಿ ತಲಾ ಒಂದೊಂದು ಲಕ್ಷ ಪುಷ್ಟಿ ಯೋಜನೆಯಡಿ ಪುರಸ್ಕಾರ ದೊರೆತಿದೆ. ಮುಖ್ಯಮಂತ್ರಿ ಪುರಸ್ಕಾರಕ್ಕೆ ಭಾಜನರಾಗಲು, ಜಿಲ್ಲೆಯಲ್ಲಿ ಶೇ.100 ಫಲಿತಾಂಶ ದೊರೆಯಲು ಶಾಲಾಭಿವೃದ್ಧಿ ಸಮಿತಿ ತಂಡ ಹಾಗೂ ಪಾಲಕರ ಸಹಕಾರ ಕಾರಣ ಎಂದರು.
ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ್ ಮಾತನಾಡಿದರು. ಸಹ ಶಿಕ್ಷಕರಾದ ಆಂಜನೇಯ, ಶಾಂತಮೂರ್ತಿ, ಪ್ರದೀಪ್ ಕುಮಾರ್, ಸವಿತಾ, ಅಮೃತ, ಪೋಷಕರಾದ ಮಹೇಶ್, ಮಂಜೇಶ್, ಬಿಂದು ಲೋಕೇಶ್, ಶಿವಪುರ ಲೋಕೇಶ್ ಇದ್ದರು.