ದೊಡ್ಡಬಳ್ಳಾಪುರದ ಟಿಎಪಿಸಿಎಂಎಸ್ನ ನೂತನ ಅಧ್ಯಕ್ಷ ಡಿ.ಸಿದ್ದರಾಮಯ್ಯ ಮತ್ತು ಉಪಾಧ್ಯಕ್ಷ ಜಗನ್ನಾಥ ಅವರನ್ನು ಡಿಪಿಎ ಅಧ್ಯಕ್ಷ ಚುಂಚೇಗೌಡ ಸನ್ಮಾನಿಸಿದರು. ಮುಖಂಡರಾದ ರಾಮಣ್ಣ, ಆಂಜನಮೂರ್ತಿ, ಬೈರೇಗೌಡ, ಕೆ.ಪಿ.ಜಗನ್ನಾಥ, ರವಿಕುಮಾರ್, ನಿರ್ದೇಶಕರಾದ ವೆಂಕಟೇಶ್, ಕೆಂಪೇಗೌಡ, ಆನಂದ್, ಲಕ್ಷಿ$್ಮ ನಾಗೇಶ್ ಇದ್ದರು.
ದೊಡ್ಡಬಳ್ಳಾಪುರ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಮಂಡಳಿಗೆ ಅಧ್ಯಕ್ಷರಾಗಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಡಿ.ಸಿದ್ದರಾಮಯ್ಯ ಮಾತನಾಡಿ, ಟಿಎಪಿಸಿಎಂಎಸ್ನ ಎಲ್ಲ ಸಿಬ್ಬಂದಿಗೂ ಉತ್ತಮ ಸೌಕರ್ಯ ಒದಗಿಸುತ್ತೇನೆ. ನಗರದ ಕೊಂಗಾಡಿಯಪ್ಪ ಕಾಲೇಜು, ಸಾಸಲು, ದೊಡ್ಡಬೆಳವಂಗಲ, ಮಧುರೆ, ಹೊಸಹಳ್ಳಿಯಲ್ಲಿ ಜನತಾ ಬಜಾರ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ವಿವಿಧ ಸಾಮಾಗ್ರಿ ಒಳಗೊಂಡ ಜನತಾ ಬಜಾರ ಅನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಡಿ.ಮಾರ್ಟ್ ಮಾದರಿ ಹೈಟೆಕ್ ಜನತಾ ಬಜಾರ್ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದರು.
ತಾಲೂಕಿನ ಜನತೆಗೆ ಸಮರ್ಪಕ ಪಡಿತರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಹಾಗೂ ರೈತರಿಗೆ ವಿಎಸ್ಎಸ್ಎನ್ಗಳಲ್ಲಿ ಗೊಬ್ಬರ ಮಾರಾಟದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಗರದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ವಿವಿಧ ಮುಖಂಡರು ಸನ್ಮಾಣಿಸಿದರು.