ಡ್ರೋನ್ ಪ್ರದರ್ಶನ 
ರಾಜ್ಯ

ಬಾನಂಗಳದಲ್ಲಿ ಅರಳಿದ ವಿಜಯನಗರದ ಗತವೈಭವ

ಪ್ರಮುಖ ಮುಖ್ಯಾಂಶಗಳು

  • ಉತ್ಸವದ ಅಂಗವಾಗಿ ಆಯೋಜಿಸಿದ್ದ ಡ್ರೋನ್ ಪ್ರದರ್ಶನ
  • ಬಾನಿನಲ್ಲಿ ವಿಜಯನಗರದ ಗತವೈಭವವನ್ನು ಮರುಸೃಷ್ಟಿ
  • ಸಾವಿರ ಡ್ರೋನ್‌ಗಳ ಮೂಲಕ ಮೂಡಿಬಂದ ಈ ಬೆಳಕಿನ ಚಿತ್ತಾರ
  • ರಾಜಲಾಂಛನ ವರಾಹ, ವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ರಥ, ಉಗ್ರ ನರಸಿಂಹ
ಹಂಪಿ: ಉತ್ಸವದ ಅಂಗವಾಗಿ ಆಯೋಜಿಸಿದ್ದ ಡ್ರೋನ್ ಪ್ರದರ್ಶನವು ಕಗ್ಗತ್ತಲ ಬಾನಿನಲ್ಲಿ ವಿಜಯನಗರದ ಗತವೈಭವವನ್ನು ಮರುಸೃಷ್ಟಿಸಿತು. ಸಾವಿರ ಡ್ರೋನ್‌ಗಳ ಮೂಲಕ ಮೂಡಿಬಂದ ಈ ಬೆಳಕಿನ ಚಿತ್ತಾರ ಕಂಡು ಜನತೆ ಮಂತ್ರಮುಗ್ಧರಾದರು. ಹಂಪಿ ಉತ್ಸವ 2026 ಎಂದು ಅಕ್ಷರಗಳ ಮೂಲಕ ಸ್ವಾಗತ ಕೋರಲಾಯಿತು.
ನಂತರ ವಿಜಯನಗರದ ರಾಜಲಾಂಛನ ವರಾಹ, ವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ರಥ, ಉಗ್ರ ನರಸಿಂಹ ಹಾಗೂ ಶಿವಲಿಂಗದ ಚಿತ್ರಗಳು ಮೂಡಿಬಂದವು. ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸಿಎಂ-ಡಿಸಿಎಂ ಭಾವಚಿತ್ರಗಳು ಪ್ರದರ್ಶನಗೊಂಡವು.
ಕೊನೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರ ಮೂಡಿದಾಗ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಆದರೆ, ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರ ಚಿತ್ರ ಪ್ರದರ್ಶನದಲ್ಲಿ ಇಲ್ಲದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಯಿತು.