ಕಾಳಗಿ ತಾಲೂಕಿನ ಕೊಡದೂರಿನಲ್ಲಿ ಭಕ್ತರ ಜೈೂಷದ ಮಧ್ಯೆ ಶ್ರೀ ಕಂಠಿಬಸವೇಶ್ವರ ಹಾಗೂ ಮರಗಮ್ಮ ದೇವಿ ಪಲ್ಲಕ್ಕಿ ಮಹೋತ್ಸವ ನಡೆಯಿತು.
- 22ರಂದು ಅಗ್ನಿ ಪ್ರವೇಶ, ಮಹಾರಥೋತ್ಸವ
- 23ರಂದು ಮಹಾದ್ವಾರ ಉದ್ಘಾಘಟನೆ
ಕಾಳಗಿ: ಕೊಡದೂರಿನಲ್ಲಿ ಶ್ರೀ ಕಂಠಿಬಸವೇಶ್ವರ ಹಾಗೂ ಮರಗಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಶನಿವಾರ ಸಂಜೆ ಸಂಭ್ರಮದಿಂದ ದೇವಿಯ ಪಲ್ಲಕ್ಕಿ ಮಹೋತ್ಸವ ಜರುಗಿತು.
ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಅಮ್ಮನ ದರ್ಶನ ಪಡೆದು ಕೃತಾರ್ಥರಾದರು.
ಮಂಗಳವಾರ ಬೆಳಗ್ಗೆ 7ಕ್ಕೆ ರುದ್ರಾಭಿಷೇಕ ಮತ್ತು ಎಲೆಪೂಜೆ ನಡೆಸಲಾಗುವುದು. ಏ.22ರಂದು ಬೆಳಗ್ಗೆ 9.30ಕ್ಕೆ ಪುರವಂತರ ಕುಣಿತ ಹಾಗೂ ಅಗ್ನಿಪ್ರವೇಶ ಜರುಗಲಿದೆ. ಸಂಜೆ 6.30ಕ್ಕೆ ಕುಂಭ&ಕಳಸ ಮೆರವಣಿಗೆ ಹಾಗೂ ಶ್ರೀ ಕಂಠಿಬಸವೇಶ್ವರರ ಭವ್ಯ ರಥೋತ್ಸವ ಜರುಗುವುದು. ಏ.23ರಂದು ಬೆಳಗ್ಗೆ 10ಕ್ಕೆ ಕೊಡ್ಲಾದ ಶ್ರೀ ಾನಪ್ರಕಾಶ ಸ್ವಾಮಿಗಳಿಂದ ಮರಗಮ್ಮದೇವಿ ದ್ವಾರ ಬಾಗಿಲು ಉದ್ಘಾಟನೆ ನೆರವೇರುವುದು. ಸಂಜೆ 6ಕ್ಕೆ ಶ್ರೀ ಮರಗಮ್ಮದೇವಿ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದೆ. ಏ.24ರಂದು ಬೆಳಗ್ಗೆ ಮರಗಮ್ಮ ದೇವಿಗೆ ಉಡಿ ತುಂಬುವುದು ಮತ್ತು ನೈವೇದ್ಯ ಸಮರ್ಪಣೆ, ಸಂಜೆ 4ಕ್ಕೆ ಕುಸ್ತಿ ಪಂದ್ಯ ನಡೆಯಲಿವೆ. ಏ.22ರಿಂದ 24ರವರೆಗೆ ತ್ಯಾಗದ ತೊಟ್ಟಿಲು ನಾಟಕ ಪ್ರದರ್ಶನವಾಗಲಿದೆ.
ಗ್ರಾಪಂ ಮಾಜಿ ಅಧ್ಯ ರಮೇಶ ಜನಗೊಂಡ, ಟ್ರಸ್ಟ್ ಅಧ್ಯ ಭೀಮಾಶಂಕರ ಮಾಲಿಪಾಟೀಲ್, ಅಧ್ಯಕ್ಷ ನಾಗರಾಜ ಚಿನ್ನಾ, ಪ್ರಮುಖರಾದ ಸಿದ್ದಣ್ಣಗೌಡ ಪೊಲೀಸ್ ಪಾಟೀಲ್, ಡಾ.ಶಿವಾನಂದ ಮಜ್ಜಗಿ, ರಮೇಶ ಕುಲ್ಕರ್ಣಿ, ಜನಾರ್ದನ ಖದ್ದರಗಿ, ಗಣಪತಿ ಹಾಳಕಾಯಿ, ಶರಣು ಚಂದಾ, ನಾಗೀಂದ್ರ ಚಿಂದಿ, ಶರಣು ಮಜ್ಜಗಿ, ಭಂಡು ಗದ್ದಿ, ಚನ್ನಪ್ಪ ಮುತ್ಯಾ, ಆನಂದ ಮಂಗೊಂಡ, ಮರಲಿಂಗ ಮೇಲಕೇರಿ, ಬಸವರಾಜ ಮೇಲಕೇರಿ, ಗುರಿನಾಥ ಹೊಸಮನಿ, ಶರಣಪ್ಪ ಗದ್ದಿ, ಚಂದ್ರು ಪೆಚಟ್ಟಿ, ಅವಿನಾಶ ಮೂಲಿಮನಿ, ಪ್ರಕಾಶ ಮೇಲಕೇರಿ, ಮಲ್ಲಿನಾಥ ಎಸ್. ಚಿನ್ನಾ, ಮಲ್ಲಪ್ಪ ಹಾವಗೋಳ ಇತರರಿದ್ದರು.