- ಮತ್ತೊಂದು ಪ್ರಸ್ತಾವನೆಗೆ ವಿವಿ ಆಡಳಿತ ಮಂಡಳಿ ಸಿದ್ಧತೆ
- ಬೋಧಕರ 1 ಸಾವಿರ ಹುದ್ದೆ ಭರ್ತಿಗೆ ಸರ್ಕಾರ ಯೋಜನೆ
ಕಲಬುರಗಿ: ವಿಶ್ವವಿದ್ಯಾಲಯಗಳಲ್ಲಿನ ಬೋಧಕರ ಕೊರತೆ ನೀಗಿಸಲು ರಾಜ್ಯ ಸರ್ಕಾರ ಒಂದು ಸಾವಿರ ಹುದ್ದೆ ಭರ್ತಿಗೆ ಯೋಜನೆ ರೂಪಿಸಿದೆ. ಈ ಪೈಕಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸುಮಾರು 200ರಷ್ಟು ಹುದ್ದೆಗಳು ಮಂಜೂರಾಗುವ ಸಾಧ್ಯತೆ ಇದೆ. ಕನಿಷ್ಠ ಈ ಹುದ್ದೆಗಳು ಶ್ರೀ ಭರ್ತಿಯಾದಲ್ಲಿ ಖಾಲಿ ಖಾಲಿಯಾಗಿರುವ ಜ್ಞಾನಗಂಗೆಗೆ ಒಂದಿಷ್ಟು ಕಳೆ ಬರಲಿದೆ.
ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಕೊರತೆಢ ಗಂಭೀರ ಸಮಸ್ಯೆಗೆ ಸಿಲುಕಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಸಂಪೂರ್ಣ ಖಾಲಿಯಾಗಿದೆ. 200ಕ್ಕೂ ಹೆಚ್ಚು ಬೋಧಕರನ್ನು ಹೊಂದಿರಬೇಕಾದ ವಿವಿಯಲ್ಲಿ 29 ಜನ ಉಳಿದುಕೊಂಡಿದ್ದು, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಸಂಖ್ಯೆ 12ಕ್ಕೆ ಬಂದು ನಿಲ್ಲಲಿದೆ ಎಂಬುದು ಆತಂಕಕಾರಿ ಸಂಗತಿ.
ಈವರೆಗಿನ ಸರ್ಕಾರಗಳು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕಡೆಗಣಿಸುತ್ತಾ ಬಂದಿವೆ ಎಂಬುದಕ್ಕೆ ಈ ವಿಶ್ವವಿದ್ಯಾಲಯ ತಾಜಾ ನಿದರ್ಶನ. ಇನ್ನೊಂದು ವಿಚಿತ್ರವೆಂದರೆ ವಿವಿಯ 12 ವಿಭಾಗಗಳಿಗೆ ಕಾಯಂ ಶಿಕ್ಷಕರಿಲ್ಲ. ಎಂಟು ವಿಭಾಗಗಳಲ್ಲಿ ಒಬ್ಬರೇ ಕಾಯಂ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.
12 ವಿಭಾಗಗಳಲ್ಲಿ ಕಾಯಂ ಶಿಕ್ಷಕರಿಲ್ಲ
ವಿಶ್ವವಿದ್ಯಾಲಯದ 38 ವಿಭಾಗಗಳ ಪೈಕಿ ಇತಿಹಾಸ, ಸಮಾಜಶಾಸ, ಎಂಎಸ್ಡಬ್ಲೂ, ಮಹಿಳಾ ಅಧ್ಯಯನ, ಅಂಬೇಡ್ಕರ್ ಅಧ್ಯಯನ, ದೃಶ್ಯ ಕಲಾ ವಿಭಾಗ, ಸಂಗೀತ, ಮರಾಠಿ, ಸಂಸತ ಮತ್ತು ಎಂಬಿಎ, ಸೂಕ್ಷ$್ಮಜಿವಶಾಸ, ಗ್ರಂಥಾಲಯ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಅರ್ಥಶಾಸ, ಅಪ್ಲೆಡ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ, ಮಟೇರಿಯಲ್ ಸೈನ್ಸ್, ಸಂಖ್ಯಾಶಾಸ, ಪ್ರಾಣಿಶಾಸ, ಕಾನೂನು, ಕನ್ನಡ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ವಿಭಾಗದಲ್ಲಿ ತಲಾ ಒಬ್ಬರು ಕಾಯಂ ಶಿಕ್ಷಕರಿದ್ದಾರೆ.
ಶಿಕ್ಷಕರ 172 ಹುದ್ದೆ, ಶಿಕ್ಷಕೇತರರ 283 ಹುದ್ದೆ ಸೇರಿ ಒಟ್ಟು 455 ಹುದ್ದೆಗಳು ಖಾಲಿ ಇವೆ. ಮೂರು ದಶಕಗಳ ಇತಿಹಾಸ ಹೊಂದಿರುವ ಈ ವಿಶ್ವವಿದ್ಯಾಲಯಕ್ಕೆ ಕಾಯಂ ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರು, ಹೊರಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುವವರು ಸೇರಿ 478 ಜನ ಕೆಲಸ ನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ನಲ್ಲಿ 165 ಜನ ಅತಿಥಿ ಉಪನ್ಯಾಸಕರಿದ್ದು, 12 ಜನ ಡಾಟಾ ಎಂಟ್ರಿ ಆಪರೇಟರ್ಸ್, 21 ಜನ ಆರೋಗ್ಯ ಕೇಂದ್ರ, ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಕ್ಯೂರಿಟಿಗಾಗಿ 25 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರೇ ವಿಶ್ವವಿದ್ಯಾಲಯದ ಜೀವಾಳ ಎಂಬ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಖಾಲಿ ಹುದ್ದೆ ಭರ್ತಿ ಮಾಡಿ ಹಿಂದುಳಿದ ಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕಿದೆ.
ವಿಶೇಷವಾಗಿ ಮೌಲ್ಯಮಾಪನ ವಿಭಾಗದಲ್ಲಿ 13 ಜನ ಕಾಯಂ ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ, ಗುತ್ತಿಗೆ ಆಧಾರದಲ್ಲಿ 23 ಜನ ಇದ್ದಾರೆ. ಕೆಲಸದ ಒತ್ತಡವಂತೂ ಇದೆ. ಹುದ್ದೆ ಮಂಜೂರಾಗಿ ನೇಮಕ ಪ್ರಕ್ರಿಯೆ ಶುರುವಾದರೆ ಸರ್ಕಾರದ ನಿಯಮಾವಳಿ, ಮೀಸಲು, 371(ಜೆ) ಆಧರಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ವಿವಿ ನಿರ್ಧರಿಸಿದೆ.
"
ವಿಶ್ವವಿದ್ಯಾಲಯದಲ್ಲಿ ಬೋಧಕರ ಬಹುತೇಕ ಹುದ್ದೆಗಳು ಖಾಲಿಯಾಗಿದ್ದು, ನಿವೃತ್ತಿಯಾಗುತ್ತಿರುವ ಬೋಧಕರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಖಾಲಿ ಹುದ್ದೆಗಳ ಭರ್ತಿ ಆಗಬೇಕಿದೆ. ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಆದ್ಯತೆ ಆಧಾರದ ಮೇಲೆ ರಾಜ್ಯ ಸರ್ಕಾರ ಶ್ರೀ ಭರ್ತಿ ಮಾಡುವ ನಿರೀಕ್ಷೆ ಇದೆ. ಈ ವರ್ಷದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
— ಪ್ರೊ.ಶಶಿಕಾಂತ ಎಸ್.ಉಡಿಕೇರಿ, ಕುಲಪತಿ, ಗುಲ್ಬರ್ಗ ವಿವಿ, ಕಲಬುರಗಿ.
"
ಶಿಕ್ಷಕರಿಲ್ಲದೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುವುದು ಅಸಾಧ್ಯದ ಮಾತು. ಕಳೆದ ಅನೇಕ ವರ್ಷಗಳಿಂದ ಗುಲ್ಬರ್ಗ ವಿವಿಯಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಪೂರ್ಣ ಖಾಲಿ ಖಾಲಿಯಾಗಿದೆ. ಇದೀಗ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಾಸ್ತವ ಅರಿತು ಸೂಕ್ತ ಕ್ರಯ ಕೈಗೊಳ್ಳುವ ಮೂಲಕ ಈ ವಿಶ್ವವಿದ್ಯಾಲಯ ಬಚಾವ್ ಮಾಡಬೇಕು.
— ಡಾ.ಬಸವರಾಜ ಕುಮ್ನೂರು, ನಿವೃತ್ತ ಪ್ರಾಚಾರ್ಯರು, ಕಲಬುರಗಿ.