ಹುಲಸೂರಿನ ಜೆಬಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ದಿಲೀಪಕುಮಾರ ಪಂಚಾಳ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸರ್ಕಾರಿ ವಕೀಲ ಬಾಲಾಜಿ ಆದೆಪ್ಪ, ಚಂದ್ರಕಾಂತ ಪಾರಶೆಟ್ಟೆ, ಅಶೋಕ ಕಮಠಾಣೆ, ಉದಯರಾಜ ಪಾರಶೆಟ್ಟೆ, ಮಧುಮಾಲಾಶ್ರೀ ಇತರರಿದ್ದರು. 
ರಾಜ್ಯ

ಶಿಕ್ಷಕರ ಕೈಯಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿ
  • ಹುಲಸೂರಿನಲ್ಲಿ ನಿವೃತ್ತ ಎಚ್​ಎಂ ದಿಲೀಪಕುಮಾರ ಪಂಚಾಳಗೆ ಸನ್ಮಾನ
ಹುಲಸೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪರಿಶ್ರಮ ಸಾಕಷ್ಟಿದೆ. ಅವರ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಜೆಬಿಕೆ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ದಿಲೀಪಕುಮಾರ ಪಂಚಾಳ ದಂಪತಿಯನ್ನು ಸನ್ಮಾನಿಸಿ ಆಶೀರ್ವದಿಸಿದ ಅವರು, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ವಿವಿಧ ಕ್ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಕರ ಮಾರ್ಗದರ್ಶನ ಬೇಕೇಬೇಕು. ಮಕ್ಕಳು ವಿವಿಧ ಚಟಗಳಿಗೆ ದಾಸರಾಗದೆ ಶಿಕ್ಷಕರು ಹೇಳುವ ಪಾಠಗಳನ್ನು ಆಲಿಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ದಿಲೀಪಕುಮಾರ ಪಂಚಾಳ ನಮ್ಮ ಶಾಲೆಯಲ್ಲಿ ಸುಮಾರು 16 ವರ್ಷ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಉತ್ತಮ ಸೇವೆ ಸಲ್ಲಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸರ್ಕಾರಿ ವಕೀಲ ಬಾಲಾಜಿ ಆದೆಪ್ಪ, ಪ್ರಮುಖರಾದ ಚಂದ್ರಕಾಂತ ಪಾರಶೆಟ್ಟೆ, ಅಶೋಕ ಕಮಠಾಣೆ, ಉದಯರಾಜ ಪಾರಶೆಟ್ಟೆ, ಶ್ರವಣಕುಮಾರ, ಬಳಿರಾಮ ಮೋರೆ, ಜಗನ್ನಾಥ ಮಟಕುಂಟೆ, ಪ್ರಕಾಶ ವಾಂಜರಖೇಡೆ, ಓಂಕಾರ ಪಾಟೀಲ್​, ಮಧುಮಾಲಾಶ್ರೀ ವಟಗೆ ಇತರರಿದ್ದರು. ಗದಗಯ್ಯ ಮಠಪತಿ ಸ್ವಾಗತಿಸಿ ನಿರೂಪಣೆ ಮಾಡಿದರು.