ಹುಲಸೂರಿನ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಅವಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯನ್ನು ಮಾಜಿ ಜಿಪಂ ಸದಸ್ಯ ಮಲ್ಲಪ್ಪ ಧಬಾಲೆ ಉದ್ಘಾಟಿಸಿದರು. ಕಾಶೀನಾಥ ಪಾರಶೆಟ್ಟೆ, ಬಂಡುರಾವ ಪಾಟೀಲ, ಶಿವಕುಮಾರ ಬಿರಾದಾರ, ಭಗವಾನರಾವ ಕುಲಕರ್ಣಿ, ಉದಯರಾಜ, ವೀರಪ್ಪ ಪಂಚಾಳ ಇತರರಿದ್ದರು.
- ಮಾಜಿ ಜಿಪಂ ಸದಸ್ಯ ಧಬಾಲೆ ಅಭಿಮತ
- ಹುಲಸೂರಿನಲ್ಲಿ ಪಾಲಕರ ಸಭೆ
ಹುಲಸೂರು: ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದು ಶಿಕ್ಷಣ ಪ್ರೇಮಿ, ಮಾಜಿ ಜಿಪಂ ಸದಸ್ಯ ಮಲ್ಲಪ್ಪ ಧಬಾಲೆ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಅವಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡದ ಅವರು, ಶಿಕ್ಷಕರ ವೃತ್ತಿ ಅಮೂಲ್ಯವಾಗಿದ್ದು, ನಿಮ್ಮ ಸೇವೆ ಅಮರವಾಗಿರುತ್ತದೆ. ಮಕ್ಕಳಿಗೆ ಸರಿದಾರಿ ತೋರಿಸುವ ಕೆಲಸ ಶಿಕ್ಷಕರು ಮಾಡುತ್ತಾರೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡುವುದು ಅವಶ್ಯಕವಾಗಿದೆ. ಹೆಚ್ಚು ಅಂಕ ಪಡೆದರೆ ಮಾತ್ರ ಒಳ್ಳೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಭಗವಾನರಾವ ಕುಲಕರ್ಣಿ ಮಾತನಾಡಿ, ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಶಿಕ್ಷಕರ ಜತೆಗೆ ಪಾಲಕರು ಸಮಯ ನೀಡುವುದು ಅವಶ್ಯಕ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದಿಗೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.
ನಿವೃತ ಶಿಕ್ಷಕ ಶಿವಕುಮಾರ ಬಿರಾದಾರ, ಸಂಸ್ಥೆ ನಿರ್ದೇಶಕ ರಾಜಕುಮಾರ ನಿಡೋದೆ, ಪ್ರಾಥಮಿಕ ಶಾಲೆ ಮುಖ್ಯಗುರು ಉದಯರಾಜ ಪಾರಶೆಟ್ಟಿ, ಕು.ಮೈನಾಜ್ ಫಾತಿಮಾ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಪಾರಶೆಟ್ಟಿ, ಕಾರ್ಯದರ್ಶಿ ಬಂಡುರಾವ ಪಾಟೀಲ, ನಿವೃತ್ತಿ ಶಿಕ್ಷಕ ಶಿವಕುಮಾರ ಬಿರಾದಾರ, ವೀರಪ್ಪ ಪಂಚಾಳ, ಬಸವರಾಜ ಖಿಂಡಿಮಠ, ಉದಯರಾಜ ಕರಕಲ್ಲೆ, ಸುಂದರಮ್ಮ ಇತರರಿದ್ದರು. ಪರಶುರಾಮ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು.