ಫುಟ್​ಪಾತ್​ ಕಾಮಗಾರಿ ಅರ್ಧಕ್ಕೆ ಸ್ಥಗಿತ footpath 
ರಾಜ್ಯ

ಫುಟ್​ಪಾತ್​ ಕಾಮಗಾರಿ ಅರ್ಧಕ್ಕೆ ಸ್ಥಗಿತ footpath

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
  • ಬಹುತೇಕ ಕಡೆ ಪಾದಚಾರಿ ಮಾರ್ಗ ಒತ್ತುವರಿ
ಶ್ರೀನಿವಾಸಪುರ: ಪುರಸಭೆಯಿಂದ ಪಟ್ಟಣದ ವಿವಿಧ ರಸ್ತೆಗಳಲ್ಲಿ ುಟ್​ಪಾತ್​ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿಳಂಬದಿಂದ ಕೆಲಸ ಕುಂಟುತ್ತಿದೆ. ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. footpath
ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ತಾಲೂಕು ಕಚೇರಿ, ಬ್ಯಾಂಕ್​, ಸರ್ಕಾರಿ ಇಲಾಖೆ ಕಚೇರಿಗಳಿಗೆ, ಆಸ್ಪತ್ರೆ ಸೇರಿ ಹಲವು ಕೆಲಸಗಳ ಮೇರೆಗೆ ಆಗಮಿಸುವ ಸಾರ್ವಜನಿಕರು ಓಡಾಡಲು ಸುಸಜ್ಜಿತ ಪಾದಚಾರಿ ಮಾರ್ಗವಿಲ್ಲದೇ ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಫುಟ್​ಪಾತ್ ಪ್ರಗತಿಗೆ 12 ಲಕ್ಷ ರೂ. ವೆಚ್ಚದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದ್ದು, ಪಟ್ಟಣದ ಎಂಜಿ ರಸ್ತೆ ಲಕ್ಷಿ$್ಮ ನರಸಿಂಹಸ್ವಾಮಿ ದೇವಾಲಯದಿಂದ ಕೆಇಬಿ ಕಚೇರಿವರೆಗೂ ಜಲ್ಲಿ ಹಾಕಿ ಅರ್ಧಕ್ಕೆ ಬಿಡಲಾಗಿದೆ. ಮತ್ತೊಂದೆಡೆ ಬ್ಯಾಂಕ್​ಗಳು ಮತ್ತು ಜೆರಾಕ್ಸ್​, ಕಂಪ್ಯೂಟರ್​, ಸ್ಟೆಷನರಿ, ದಿನಸಿ ಅಂಗಡಿಗಳ ಮುಂಭಾಗ ಸುಮಾರು 2&-3 ತಿಂಗಳ ಹಿಂದೆ ಜಲ್ಲಿ ಹಾಕಿ ಹಾಕಿದ ಗುತ್ತಿಗೆದಾರರು ಮತ್ತೆ ಆ ಕಡೆ ತಿರುಗಿಯೂ ನೋಡಿಲ್ಲ. ಪ್ರತಿದಿನ ಮನೆಗಳು ಮತ್ತು ಅಂಗಡಿಗಳ ಮುಂಭಾಗ ವೃದ್ಧರು, ಅಂಗವಿಕಲರು, ಮಕ್ಕಳು ಓಡಾಡಲು ತೀವ್ರ ಸಮಸ್ಯೆಯಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ತ್ವರಿತವಾಗಿ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸ್ಥಳಿಯ ನಿವಾಸಿಗಳು ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.
ಒತ್ತುವರಿ ತೆರವಿಗೆ ಆಗ್ರಹ: ಪಟ್ಟಣವು ವರ್ಷದಿಂದ ವರ್ಷಕ್ಕೆ ಭೌಗೋಳಿಕಗಾಗಿ ಬೆಳೆಯುತ್ತಿದೆ. ಜನ ಸಂಖ್ಯೆಗೆ ತಕ್ಕಂತೆ ವಾಹನಗಳ ದಟ್ಟಣೆಯೂ ಹೆಚ್ಚಾಗುತ್ತಿದೆ. ುಟ್​ಪಾತ್​ ಒತ್ತುವರಿ ಮಾಡಿಕೊಂಡು ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು, ಇದರಿಂದ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳಬಾಗಿಲು, ಚಿಂತಾಮಣಿ, ಗೌನಿಪಲ್ಲಿ, ಕೋಲಾರ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ುಟ್​ಪಾತ್​ ಒತ್ತುವರಿಗೆ ಒಳಗಾಗಿವೆ. ರಸ್ತೆಯಲ್ಲಿ ಹೋಗುವಾಗ ಹಿಂಬದಿಯಿಂದ ವಾಹನಗಳು ಜೋರಾಗಿ ಬಂದರೆ ಅಪಾಯ ತಪ್ಪಿದ್ದಲ್ಲ. ಪುರಸಭೆ, ಪೊಲೀಸರು ಈ ಬಗ್ಗೆ ಗಮನ ಹರಿಸಿ ುಟ್​ಪಾತ್​ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅವರೆಕಾಯಿ ಮಾರಾಟಕ್ಕೆ ಜಾಗ ಗುರುತಿಸಿ: ಶ್ರೀನಿವಾಸಪುರದಿಂದ ಮುಳಬಾಗಿಲಿಗೆ ಹಾದು ಹೋಗುವ ಎಂಜಿ ರಸ್ತೆಯಲ್ಲಿ ಅವರೆಕಾಯಿ ವ್ಯಾಪಾರ ನಡೆಯುತ್ತದೆ. ಇದಕ್ಕೆಂದು ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ವ್ಯಾಪಾರಿಗಳು ಈ ರಸ್ತೆಯಲ್ಲಿ ಹೆಚ್ಚಾಗಿ ಇರುವುದರಿಂದ ರೈತರು ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ. ಇಲ್ಲಿಂದ ಆಂಧ್ರ, ತಮಿಳುನಾಡಿಗೆ ಅವರೆ ಕಾಯಿ ಸರಬರಾಜು ಆಗುತ್ತದೆ. ಅವರೆ ಕಾಯಿ ಸುಗ್ಗಿಯೂ ಶುರುವಾಗುವ ಮುನ್ನವೇ ಪ್ರತ್ಯೇಕ ಜಾಗ ಸೂಚಿಸುವ ಮೂಲಕ, ವಾಹನ ದಟ್ಟಣೆ ನಿವಾರಣೆಗೆ ಪರಿಹಾರ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕಾಮಗಾರಿ ವಿಳಂಬ ಕುರಿತು ಪರಿಶೀಲಿಸಿ ಈಗಾಗಲೇ ಗುತ್ತಿಗೆದಾರನಿಗೆ ನೋಟಿಸ್​ ಜಾರಿ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸದಿದ್ದರೆ ಕಪು$್ಪ ಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು.

"

ಕಳೆದ ಎರಡ್ಮೂರು ತಿಂಗಳಿಂದ ಕೆಲಸ ನಿಂತು ಹೋಗಿದೆ. ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖಾಧಿಖಾರಿಗಳು ಕೆಲಸ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ಪಟ್ಟಣದಲ್ಲಿನ ರಸ್ತೆಗಳು ಕಿರಿದಾಗಿವೆ. ಕೆಲವರು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಬೇಕು.