ಶಹಾಬಾದ್​ನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೃತ್ಯುಂಜಯ ಸ್ವಾಮಿ ಹಿರೇಮಠ ಅಧಿಕಾರ ಸ್ವೀಕರಿಸಿದರು. ಚಂದ್ರಿಕಾ ಪರಮೇಶ್ವರ, ಡಾ.ಎಂ.ಎ.ರಶೀದ್​ ಇತರರಿದ್ದರು 
ರಾಜ್ಯ

ಪಂಚ ಗ್ಯಾರಂಟಿ ಯೋಜನೆ ಸ್ಥಗಿತವಾಗಲ್ಲ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಹೇಳಿಕೆ
  • ಶಹಾಬಾದ್​ನಲ್ಲಿ ತಾಲೂಕು ಅಧ್ಯಕ್ಷರ ಪದಗ್ರಹಣ
ಶಹಾಬಾದ್​: ನಮ್ಮದು ಜನಪರ ಸರ್ಕಾರವಾಗಿದ್ದು, ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಸ್ಥಗಿತವಾಗುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಹೇಳಿದರು.
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಕಚೇರಿ ಉದ್ಘಾಟನೆ, ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದೆ. ಇದೀಗ ಪರಿಶೀಲನೆಯಲ್ಲಿ ಕೇವಲ ಮೃತರ ಹೆಸರುಗಳನ್ನು ಮಾತ್ರ ಯೋಜನೆಯಿಂದ ತೆಗೆದು ಹಾಕಲಾಗುತ್ತಿದೆ. ಸಿ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರವೂ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿದ್ದು, ಇದರಿಂದ ನಿರುದ್ಯೋಗ ಸಮಸ್ಯೆ ದೂರವಾಗಲಿದೆ ಎಂದರು.
ಸಮಿತಿ ತಾಲೂಕು ಅಧ್ಯಕ್ಷ ಮೃತ್ಯುಂಜಯ ಸ್ವಾಮಿ ಹಿರೇಮಠ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಚಿವ ಪ್ರಿಯಾಂಕ್​ ರ್ಖಗೆ ಅವರು ಮುತುವರ್ಜಿ ವಹಿಸಿ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಅಧಿಕಾರ ನೀಡಿದ್ದಾರೆ. ಈ ಹುದ್ದೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದರ ಜತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುವೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ಪ್ರಮುಖರಾದ ವಿಜಯಕುಮಾರ ಮುಟ್ಟತ್ತಿ, ಸುರೇಶ ನಾಯಕ, ಸೋಮೆಶೇಖರ ಹಿರೇಮಠ, ಮಾಣಿಕಗೌಡ ಪಾಟೀಲ್​, ಸಾಬೇರಾ ಬೇಗಂ, ಬಸವರಾಜ ಮಾಲಿಪಾಟೀಲ್​, ಭಾನುಪ್ರಕಾಶ ಪವಾರ್​, ಚಂದು ನಾಯಕ, ಸಂಜೀವ ಕುಮಾರ, ನರಸಿಂಗ್​ ರಾಠೋಡ್​, ಮಲ್ಲಣ್ಣಗೌಡ, ಯಲ್ಲಾಲಿಂಗ, ಮೋಹನರಾವ ಸೂರಿ, ಮಹ್ಮದ್​ ಅಲಿ, ಅಜೀಮ್​ ಸೇಠ, ಸಾಹೇಬಗೌಡ ಬೊಗುಂಡಿ, ಕೃಷ್ಣಪ್ಪ ಕರಣಿಕ, ಜಾವೀದ್​, ಕುಮಾರ ಚವ್ಹಾಣ್​, ಕಿರಣ ಚವ್ಹಾಣ್​, ರಾಜೇಶ ಯನಗುಂಟಿಕರ್​, ಶರಣು ಪಗಲಾಪುರ, ನಾಗೇಂದ್ರ ನಾಟೀಕಾರ, ಅಧಿಕಾರಿಗಳಾದ ಮಹ್ಮದ್​ ಯೂನುಸ್​, ಯಲ್ಲಾಲಿಂಗ, ಪೂಜಾ, ಶಿವಶರಣಪ್ಪ ಭೊಶೆಟ್ಟಿ, ಸಾಬಣ್ಣ ಸುಂಗಲಕರ್​ ಇತರರಿದ್ದರು.
ತಾಪಂ ಇಒ ಮಲ್ಲಿನಾಥ ರಾವೂರ ಸ್ವಾಗತಿಸಿದರು. ಮರಿಯಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಜಗನ್ನಾಥರಾವ ನಿರೂಪಣೆ ಮಾಡಿದರು.