ಎಸ್.ಎನ್.ನಾರಾಯಣಸ್ವಾಮಿ ಪರಿಹಾರ ಧನದ ಚೆಕ್ ವಿತರಿಸಿದರು Meeting
- ಕೋಮುಲ್ ನಿರ್ದೇಶಕ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ
ಬಂಗಾರಪೇಟೆ: ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದರಿಂದ Meeting
ಕೋಮುಲ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ. ನ್ಯಾಯ ಸಿಗುವವರೆಗೂ ಭ್ರಷ್ಟಾಚಾರದ ಬಗ್ಗೆ ಹೋರಾಟ ಮುಂದುವರಿಸಲಾಗುವುದು ಎಂದು ಕೋಮುಲ್ ನಿರ್ದೇಶಕ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಸ್ಥಳಿಯ ಕೋಮುಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಕಾಲಿಕವಾಗಿ ಮೃತಪಟ್ಟ 27 ರಾಸುಗಳ ಲಾನುಭವಿಗಳಿಗೆ 19 ಲಕ್ಷ ರೂ. ಸಹಾಯಧನದಚೆಕ್ ವಿತರಿಸಿ ಮಾತನಾಡಿದರು.
ಕೋಮುಲ್ ಭ್ರಷ್ಟ್ಟಾಚಾರ ವಿರುದ್ಧ ಹೋರಾಟ ಮುಂದುವರೆಯಲಿದ್ದು, ಭ್ರಷ್ಟಾಚಾರ ಸರಿಪಡಿಸುವವರೆಗೂ ಸಭೆಗಳಲ್ಲಿ ಕಾಫಿ, ನೀರು ಸಹ ಮುಟ್ಟುವುದಿಲ್ಲ. ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ದುರ್ಬಳಕೆ ಆಗಿರುವ ಬಗ್ಗೆ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಅನ್ಯಾಯಕ್ಕೊಳಗಾದ ರೈತರಿಗೆ ಹಣವಾಪಸ್ ಕೊಡಿಸಿ ಪಾರದರ್ಶಕ ಆಡಳಿತ ನೀಡಲಾಗುವುದು ಎಂದರು.
ಡೇರಿಗಳು ಲಾಭದಲ್ಲಿ ನಡೆಯಲು ಮಹಿಳೆಯರ ಶ್ರಮ ಮುಖ್ಯವಾಗಿದೆ. ಮಹಿಳೆಯರ ಶ್ರಮ ಇಲ್ಲದೇ ಇದ್ದಿದ್ದರೆ ಹೈನುಗಾರಿಕೆ ದೇಶದಲ್ಲಿ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ಹಾಗಾಗಿ ಡೇರಿಗಳಲ್ಲಿ ನಡೆಯುವ ಅವ್ಯವಹಾರ ಬಗ್ಗೆ ಕಡಿವಾಣ ಅಗತ್ಯವಾಗಿದೆ ಎಂದರು.
ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಹಕಾರ ಸಂ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ನಂದಿನಿ ಹಾಲು ಮಾರಾಟ ಮಳಿಗೆ ತೆರೆಯಲಾಗುವುದು ಎಂದರು.