The festival of Mariyamma Devi is a success.
ಗುಬ್ಬಿ: ತಾಲೂಕಿನ ನಿಟ್ಟೂರಿನ ಗ್ರಾಮದೇವತೆಗಳಾದ ಮರಿಯಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ರಥೋತ್ಸವವು ಅದ್ದೂರಿಯಾಗಿ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ಅಮ್ಮನವರ ಮೂರ್ತಿಗೆ ವಿವಿಧ ಅರ್ಚನೆಗಳನ್ನು ವಾಡಿ ವಿವಿಧ ಪುಷ್ಪಗಳು ಹಾಗೂ ಸುಗಂಧ ದ್ರವ್ಯಗಳಿಂದ ಅಲಂಕಾರ ವಾಡಲಾಗಿತ್ತು. ಬುಧವಾರ ರಾತ್ರಿ ದೇವರ ಮೂರ್ತಿಗಳನ್ನು ಗ್ರಾಮದಲ್ಲಿ ಮೆರವಣಿಗೆ ವಾಡಿ ಗುರುವಾರ ಬೆಳಗಿನ ಜಾವದ ವೇಳೆಗೆ ದೇವಾಲಯದ ಮುಂಭಾಗ ಅಣಿಗೊಳಿಸಿದ್ದ ಅಗ್ನಿಕುಂಡದ ಸಮೀಪ ದೇವರ ಮೂರ್ತಿಗಳನ್ನು ತಂದು ಮಹಾಮಂಗಳಾರತಿ ನೆರವೇರಿಸಲಾಯಿತು. ದೇವರ ಮೂರ್ತಿಗಳು ಅಗ್ನಿಕೊಂಡ ಪ್ರವೇಶಿಸಿದ ನಂತರ ಭಕ್ತರು ಹರಕೆ ಸಲ್ಲಿಸಿದರು. ನಂತರ ದೇವರ ಮೂರ್ತಿಗಳನ್ನು ರಥದಲ್ಲಿ ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧೆಡೆಯಿಂದ ಆಗಮಿಸಿ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.