The family is the solid foundation for a sustainable society.
ಗುಬ್ಬಿ: ಇಂದಿನ ವೇಗದ ಜೀವನಶೈಲಿ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಮತ್ತು ಹೆಚ್ಚುತ್ತಿರುವ ಒತ್ತಡಗಳ ನಡುವೆ ವ್ಯಕ್ತಿಯ ಭಾವನಾತ್ಮಕ ಸ್ಥಿರತೆಗೆ ಕುಟುಂಬದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕ ಎಚ್.ಜಿ.ಶಶಿಧರ ತಿಳಿಸಿದರು.
ಪಟ್ಟಣದ ಹೊರವಲಯದ ಹೇರೂರು ಗ್ರಾಮದಲ್ಲಿ ಭೂಮಿ ಪಬ್ಲಿಕ್ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ ತುಮಕೂರು ಆಶ್ರಯದಲ್ಲಿ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳ ಮತ್ತು ಕಾಯ್ದೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬವು ವ್ಯಕ್ತಿಯ ಜೀವನದ ಮೊದಲ ಶಾಲೆಯಾಗಿದೆ. ಪ್ರೀತಿ, ಕಾಳಜಿ, ನಂಬಿಕೆ ಮತ್ತು ಪರಸ್ಪರ ಗೌರವವನ್ನು ಕುಟುಂಬದಲ್ಲಿ ಕಾಣಬಹುದು. ಭಾವನಾತ್ಮಕವಾಗಿ ಸದೃಢ ವ್ಯಕ್ತಿ ಮತ್ತು ಸುಸ್ಥಿರ ಸಮಾಜ ನಿಮಾರ್ಣಕ್ಕೆ ಕುಟುಂಬವೇ ಭದ್ರ ಬುನಾದಿಯಾಗಿದೆ ಎಂದರು.
ಪ್ರಧಾನಮಂತ್ರಿ ಮಾತೃವಂದನಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಎಚ್.ಎಲ್.ರಂಗನಾಥ ಮಾತನಾಡಿ, ಸೈಬರ್ ಕೆಂ ಅಪರಾಧ, ಇಂಟರರ್ನೆಟ್, ಡಿಜಿಟಲ್ ಸಾಧನಗಳನ್ನು ಬಳಸಿ ಮಾಡುವ ಕಾನೂನುಬಾಹಿರ ಚಟವಟಿಕೆ, ಆನ್ಲೈನ್ ಬ್ಯಾಂಕಿಂಗ್ ವಂಚನೆ, ಮಾಹಿತಿ ಕಳ್ಳತನ, ಹ್ಯಾಕಿಂಗ್ ಮತ್ತು ಸಾಮಾಜಿಕ ಮಾಧ್ಯಮ ಕಿರುಕುಳ ಇದರ ಮುಖ್ಯ ವಿಧಗಳ ವಂಚನೆಗೆ ಒಳಗಾದ ತಕ್ಷಣ 1930 ಗೆ ಕರೆ ಮಾಡಿ, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ನಲ್ಲಿ ದೂರು ದಾಖಲಿಸಿ ಎಂದರು.
ಪ್ರಾಂಶುಪಾಲ ಮೆಹನಾಜ್ ಕ್ವಾದ್ರಿ, ಶಿಕ್ಷಕಿ ಚಂದನ, ಆಡಳಿತ ಅಧಿಕಾರಿ ಜಿ.ಎಸ್.ಭವ್ಯಾ ಇದ್ದರು.