ಗುಳೇದಗುಡ್ಡ ಪಟ್ಟಣದ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೋಟೆಕಲ್ ಗ್ರಾಮದ ರಾಜು ದೇಸಾಯಿ, ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಶ್ಯಾಮಣ್ಣ ಪತ್ತಾರ ಇತರರಿದ್ದರು. 
ರಾಜ್ಯ

ಅಧಿಕ ಮಾಸ ದೇವರಿಗಾಗಿಯೇ ಮೀಸಲು

ಪ್ರಮುಖ ಮುಖ್ಯಾಂಶಗಳು

  • ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳ ಅಭಿಮತ
  • ಪುರಾಣ ಪ್ರವಚನ ಕಾರ್ಯಕ್ರಮ
ಗುಳೇದಗುಡ್ಡ: ಅಧಿಕ ಮಾಸವು ಅತ್ಯಂತ ಪವಿತ್ರವಾಗಿದ್ದು, ದೇವತಾ ಆರಾಧನೆಗೆ ಮೀಸಲಾಗಿರುವ ಮಾಸವಾಗಿದೆ ಎಂದು ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ಅಂಗವಾಗಿ ನಡೆದ ಮೌನಾನುಷ್ಠಾನ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾಸದಲ್ಲಿ ಪೂಜೆ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿತ್ಯ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡುವುದು ಅಗತ್ಯ ಎಂದು ತಿಳಿಸಿದರು.
ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸವು ಧಾರ್ಮಿಕವಾಗಿ ವಿಶೇಷ ಮಹತ್ವ ಹೊಂದಿದ್ದು, ಶ್ರೀಮಠದಲ್ಲಿ ನಡೆಯುತ್ತಿರುವ ಪುರಾಣ ಪ್ರವಚನ ಪರಂಪರೆ ಮುಂದುವರಿಯುತ್ತಿದೆ ಎಂದು ಹೇಳಿದರು.
ಕೋಟೆಕಲ್ ಗ್ರಾಮದ ರಾಜು ದೇಸಾಯಿ ಉದ್ಘಾಟಿಸಿದರು. ಶ್ಯಾಮಣ್ಣ ಪತ್ತಾರ ಹಾಗೂ ಬಸವರಾಜ ಅಬ್ಬಿಗೇರಿ ಸಂಗೀತ ಸೇವೆ ಸಲ್ಲಿಸಿದರು. ಈರಣ್ಣ ಬೂದಿಹಾಳಮಠ ಪ್ರಸಾದ ವಿತರಣೆ ನಡೆಸಿದರು.
ಸಂಗಪ್ಪ ಹಡಪದ, ಸಂಗಪ್ಪ ಜವಳಿ, ರಂಗಪ್ಪ ಅರಮನ್ನವರ, ನೀಲಪ್ಪ ಅಬಕಾರಿ, ಸಂಗಪ್ಪ ಆಲೂರ, ಮುತ್ತಪ್ಪ ಅಬಕಾರಿ, ಮಹಾಂತೇಶ ಹಿರೇಮಠ, ಹನಮಂತ ವಾರಿ, ಬಸವರಾಜ ಚಿಕ್ಕನರಗುಂದ, ಶಿವಾನಂದ ಮಳ್ಳಿಮಠ, ಯಲಗೂರೇಶ ಅರಮನಿ, ಹುಚ್ಚೇಶ ಕಮತರ, ಅಶೋಕ ರೋಜಿ, ಹುಚ್ಚಪ್ಪ ಅಬಕಾರಿ, ಪರಸಪ್ಪ ಆಲೂರ, ಈರಯ್ಯ ಬೂದಿಹಾಳಮಠ, ಕಾಜಗಾರ, ಈರಣ್ಣ ಕವಡಿಮಟ್ಟಿ ಇತರರಿದ್ದರು.