ಹುಮನಾಬಾದ್​ನಲ್ಲಿ ದಿವಂಗತ ಮಾಜಿ ಲೋಕಸಭಾ ಸದಸ್ಯ ರಾಮಚಂದ್ರ ವೀರಪ್ಪ ಆರ್ಯ ಅವರ 22ನೇ ಪುಣ್ಯಸ್ಮರಣೆಯ ನಿಮಿತ್ತ ಶನಿವಾರ ಅವರ ಸಮಾಧಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಪುಷ್ಪನಮನ ಸಲ್ಲಿಸಿದರು. ಬಸವರಾಜ ಆರ್ಯ, ಸೋಮನಾಥ ಪಾಟೀಲ್​, ಬಾಬು ವಾಲಿ ಇತರರಿದ್ದರು. 
ರಾಜ್ಯ

ರಾಮಚಂದ್ರ ವೀರಪ್ಪ ಆದರ್ಶ ಸದಾ ಸ್ಮರಣೀಯ

ಹುಮನಾಬಾದ್​: ಬೀದರ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರುವಾಗಿ, ಪಕ್ಷದ ಸೋಲಿಲ್ಲದ ಸರದಾರರಾಗಿ ಗುರುತಿಸಿಕೊಂಡಿದ್ದ ದಿವಂಗತ ಮಾಜಿ ಲೋಕಸಭಾ ಸದಸ್ಯ ರಾಮಚಂದ್ರ ವೀರಪ್ಪ ಆರ್ಯ ಅವರ ಸೇವೆ ಹಾಗೂ ಆದರ್ಶ ಇಂದಿನ ಪೀಳಿಗೆಗೆ ಪ್ರೇರಣೆಯಾಗಿವೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಹೇಳಿದರು.
ಪಟ್ಟಣದಲ್ಲಿ ಶನಿವಾರ ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪ ಆರ್ಯ ಅವರ 22ನೇ ಪುಣ್ಯಸ್ಮರಣೆಯ ನಿಮಿತ್ತ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜನಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಆರ್ಯ ಅವರ ರಾಜಕೀಯ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರ ಸರಳತೆ, ಜನಪರ ಕಾಳಜಿ ಮತ್ತು ನಾಯಕತ್ವ ಸದಾ ಸ್ಮರಣೀಯವಾಗಿರಲಿದೆ ಎಂದರು.
ದಿವಂಗತ ರಾಮಚಂದ್ರ ವೀರಪ್ಪ ಆರ್ಯ ಅವರ ಪುತ್ರ ಬಸವರಾಜ ಆರ್ಯ, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್​, ಪ್ರಮುಖರಾದ ಬಾಬು ವಾಲಿ, ಅನಿಲ ಪಸರ್ಗಿ, ಬಾಬು ಕಾರಬಾರಿ, ಸುರೇಶ ಸಿಗಿ, ನಾರಾಯಣರಾವ ಚಿದ್ರಿ, ಗಿರೀಶ ತುಂಬಾ, ನಾಗಭೂಷಣ ಸಂಗಮ, ಮಾಣಿಕರಡ್ಡಿ ಕರ್ಣಿ, ಪ್ರಭಾಕರ ನಾಗರಾಳೆ ಸೇರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. ಆರ್ಯ ಕುಟುಂಬದ ಸದಸ್ಯರು ಆಯೋಜಿಸಿದ್ದ ಸಮಾಧಿ ಸ್ಥಳಕ್ಕೆ ಪೂಜೆ ಹಾಗೂ ಮಹಾಯಜ್ಞ ಪೂಜೆ ಜರುಗಿದವು.