The drought situation in Gudibande taluk is severe. 
ರಾಜ್ಯ

ಗುಡಿಬಂಡೆ ತಾಲೂಕಿನಲ್ಲಿ ಬರದ ಪರಿಸ್ಥಿತಿ ತೀವ್ರ

ಗುಡಿಬಂಡೆ: ತಾಲೂಕಿನ ರೈತರು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ರೈತರು ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು. ಇದರಿಂದ ನಷ್ಟದ ಪ್ರಮಾಣವನ್ನು ಭಾಗಃ ತಗ್ಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಭು ತಿಳಿಸಿದರು.

ತೋಟಗಾರಿಕೆ ಅಧಿಕಾರಿಗಳ ವಿರುದ್ಧ ದೂರು

ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸೂಕ್ತ ಮಾಹಿತಿ ಅಥವಾ ಯೋಜನೆಗಳ ಸೌಲಭ್ಯ ತಲುಪುತ್ತಿಲ್ಲ ಎಂದು ರೈತರು ದೂರಿದ್ದಾರೆ, ಇದರಿಂದ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಡಿಸಿ ತರಾಟೆಗೆ ತೆಗೆದುಕೊಂಡರು.

ಗುಡಿಬಂಡೆ ತಾಲೂಕಿನಲ್ಲಿ ಬರದ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಜಿಲ್ಲಾಧಿಕಾರಿ ರೈತರ ಜಮೀನಿಗೆ ತೆರಳಿ ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆದು, ಸಮಸ್ಯೆ ಆಲಿಸಿ, ಬೆಳೆ ಹಾನಿ ಸ್ಥಿತಿಗತಿ ಪರಿಶೀಲಿಸಿದರು.
ಉತ್ತರ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳದಲ್ಲೂ ಭೀಕರ ಬರಗಾಲವಿರುವುದರಿಂದ ಹೊರ ರಾಜ್ಯಗಳಿಂದ ಮೇವು ಬೀಜ ತರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲೇ ಮೇವು ಬೀಜ ಉತ್ಪಾದನೆಗೆ ಕ್ರಾಂತಿಕಾರಿ ಹೆಜ್ಜೆ ಇಡಲಾಗುತ್ತಿದೆ.

ಅಕ್ರಮ ಭೂ ಕಬಳಿಕೆ ದೂರು

ಸಾರ್ವಜನಿಕರು ತಾಲೂಕಿನಲ್ಲಿ ನಡೆಯುತ್ತಿರುವ ಭೂ ಕಬಳಿಕೆ ದಂಧೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಈ ಕುರಿತು ತಹಸೀಲ್ದಾರ್​ಗೆ ಎಚ್ಚರಿಕೆ ನೀಡಿ ಗುಡಿಬಂಡೆ ತಾಲೂಕಿನಲ್ಲಿ ಭೂ ಕಬಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಇದು ನಿಮಗಷ್ಟೇ ಅಲ್ಲ, ಇಡೀ ಆಡಳಿತಕ್ಕೆ ಕೊನೆಯ ಎಚ್ಚರಿಕೆ. ಮುಂದಿನ ದಿನಗಳಲ್ಲಿ ಇಂತಹ ಒಂದು ಪ್ರಕರಣ ಕಂಡುಬಂದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಇನ್ನು ನೀರಾವರಿ ಸೌಲಭ್ಯವಿರುವ ನೀರಾವರಿ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಸುಮಾರು 1,300 ಹಾಲು ಉತ್ಪಾದಕರ ಸಹಕಾರ ಸಂಗಳ ಮೂಲಕ ನೀರಾವರಿ ಹೊಂದಿರುವ ರೈತರನ್ನು ಆಯ್ಕೆ ಮಾಡಿ, ಬಿತ್ತನೆಯ ನಂತರ ಬೆಳೆಯ ಬೆಳವಣಿಗೆಯನ್ನು ಪ್ರತಿ ವಾರ ಹಾಗೂ ಪ್ರತಿ ತಿಂಗಳು ಫೋಟೋಗಳ ಮೂಲಕ ತಂತ್ರಜ್ಞಾನದ ನೆರವಿನಿಂದ ಅಧಿಕಾರಿಗಳು ನಿಗಾವಹಿಸಲಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು ನೂತನವಾಗಿ ನಿರ್ಮಾಣವಾಗುತ್ತಿದ್ದ ಅಂಬೇಡ್ಕರ್​ ಭವನ, ಕ್ರೀಡಾಂಗಣಕ್ಕೆ ಮಂಜೂರಾಗಿರುವ ಸ್ಥಳವನ್ನು ಪರಿಶೀಲಿಸಿದರು.