ರಾಜ್ಯ

ಬಸ್​ ಕದ್ದೊಯ್ದ ವಜಾಗೊಂಡ ಚಾಲಕ

ಪ್ರಮುಖ ಮುಖ್ಯಾಂಶಗಳು

  • ತನ್ನೂರಿಗೆ ತೆರಳಲು ಸೌಕರ್ಯ ಇಲ್ಲದ್ದಕ್ಕೆ ಸೈದಾಪುರ ನಿಲ್ದಾಣದಲ್ಲಿದ್ದ ವಾಹನ ಕಳವು
ಯಾದಗಿರಿ: ಕರ್ತವ್ಯಲೋಪ ಆರೋಪದ ಮೇರೆಗೆ ಸೇವೆಯಿಂದ ವಜಾಗೊಂಡಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್​ಟಿಸಿ)ದ ಚಾಲಕ ಕಂ ನಿರ್ವಾಹಕನೊಬ್ಬ ಬಸ್ಸನ್ನೇ ಕದ್ದೊಯ್ದಿರುವುದು ಸೈದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುಗಾದಿ ಹಬ್ಬದ ದಿನವಾದ ಗುರುವಾರ ಈ ಅಪರೂಪದ ವಿದ್ಯಮಾನ ನಡೆದಿದೆ. ಸೇವೆಯಿಂದ ವಜಾಗೊಂಡಿದ್ದ ಚಾಲಕ ಕಂ ನಿರ್ವಾಹಕ ಮಹಿಪಾಲರೆಡ್ಡಿ ಎಂಬಾತನೇ ಸೈದಾಪುರ ನಿಲ್ದಾಣದಿಂದ ಬಸ್​ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಹಿಂದೆಯೂ ಒಂದೆರಡು ಸಲ ಅಮಾನತುಗೊಂಡಿದ್ದ ಮಹಿಪಾಲರೆಡ್ಡಿ ತನ್ನ ಊರು ರಾಚನಳ್ಳಿಗೆ ಹೋಗಲು ಯಾವುದೇ ವಾಹನ ಸೌಕರ್ಯ ಇಲ್ಲದ್ದರಿಂದ ಸೈದಾಪುರ ನಿಲ್ದಾಣದಲ್ಲಿ ನಿಂತಿದ್ದ ಬಸ್ಸನ್ನೇ ಕೊಂಡೊಯ್ದಿದ್ದು, ಗ್ರಾಮದ ದೇವಸ್ಥಾನ ಎದುರು ನಿಲ್ಲಿಸಿದ್ದಾನೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಸೈದಾಪುರ ಠಾಣೆಯಲ್ಲಿ ವಿರುದ್ಧ ಕೇಸ್​ ದಾಖಲಾಗಿದ್ದು, ಕಳವಾಗಿದ್ದ ಬಸ್ಸನ್ನು ಪೊಲೀಸರು ತಂದಿದ್ದಾರೆ.