The dream of Triveni Sangam is a dream of Sri Nanasu. 
ರಾಜ್ಯ

ತ್ರಿವೇಣಿ ಸಂಗಮದ ಕನಸು ಶ್ರೀ ನನಸು

ಶಿರಾ: ಕೇಂದ್ರ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದ ನಮಗೆಲ್ಲ ನಿರಾಸೆಯಾಗಿದೆ. ತ್ವರಿತಗತಿಯಲ್ಲಿ ಸಾಗಬೇಕಿದ್ದ ಕಾಮಗಾರಿ ಕುಂಠಿತವಾಗುವ ಆತಂಕ ಸೃಷ್ಟಿಸಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ತಾಲೂಕಿನ ಮದಲೂರು ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಬರದನಾಡಾಗಿದ್ದ ಶಿರಾ ಕ್ಷೇತ್ರಕ್ಕೆ ನೀರು ಹರಿಸುವ ಮಹತ್ತರವಾದ ಕಾರ್ಯಕ್ಕೆ. ಇಂದು ತಾಯಿ ಹೇಮಾವತಿ ನೀರಿನಿಂದ ತಾಲೂಕು ಸಂಮೃದ್ಧಿಯಾಗಿ, ಅಂತರ್ಜಲ ಅಭಿವೃದ್ಧಿಯಾಗಿರುವುದು ಸಂತಸ ತಂದಿದೆ. ತ್ರಿವೇಣಿ ಸಂಗಮದ ನನ್ನ ಕನಸು ಶ್ರೀಘ್ರದಲ್ಲೇ ಸಂಪೂರ್ಣಗೊಳ್ಳಲಿದ್ದು ತಾಲೂಕು ಸದಾ ನೀರಿನಿಂದ ತುಂಬಿ ತುಳುಕುವುದು ಅಕ್ಷರ ಸಹ ಸತ್ಯ ಎಂದರು.
ರಾಧಾಕೃಷ್ಣ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ರಮೇಶಪ್ಪ, ಮುಖಂಡ ಶ್ರೀರಂಗ ಯಾದವ್​, ಸದಸ್ಯರಾದ ರಾಧಾ ಶಿವಕುಮಾರ್​, ಲತಾ, ರಂಗನಾಥ್​, ಲೀಲಾ, ಸುಮಿತ್ರಮ್ಮ, ಪಟೇಲ್​ ಈರಣ್ಣ, ಶಾಂತಮ್ಮ, ಚಂದ್ರಣ್ಣ, ಚಂದ್ರಶೇಖರ, ಸಾವಿತ್ರಮ್ಮ ,ತ್ರಿವೇಣಿ, ಎಇಇ ರಾಜಣ್ಣ, ಪಿಡಿಒ ಕರಿಯಪ್ಪ, ಉಪನ್ಯಾಸಕ ಗುಡ್ಡಣ್ಣ, ಮುಖಂಡರಾದ ಯಶೋಧರ, ಸಿದ್ದಲಿಂಗ ಮೂರ್ತಿ, ನಾಗೇಂದ್ರಪ್ಪ ಇದ್ದರು.