ಕಲಬುರಗಿ ವಾರ್ತಾ ಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ವಯೋನಿವೃತ್ತಿ ಹೊಂದಿದ ದೇವೀಂದ್ರ ಸಾಯಿಬಣ್ಣ ಅವರನ್ನು ಸತ್ಕರಿಸಿ ಶುಕ್ರವಾರ ಬೀಳ್ಕೊಡಲಾಯಿತು. ಅಪ್ಪಾರಾವ್​ ಅಕ್ಕೋಣಿ, ಬಸವರಾಜ ಪಾರಾ, ಜಿ.ಚಂದ್ರಕಾಂತ, ಬಾಬುರಾವ್​ ಯಡ್ರಾಮಿ, ಶಿವರಾಯ ದೊಡ್ಡಮನಿ, ರಾಜರತ್ನ, ಉಮಾಶಂಕರ, ಪಾಶಾ ಇತರರಿದ್ದರು 
ರಾಜ್ಯ

ವಾರ್ತಾ ಇಲಾಖೆ ವ್ಯಕ್ತಿತ್ವ ರೂಪಿಸಿದೆ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ್​ ಅಕ್ಕೋಣಿ ಹೇಳಿಕೆ
  • ದೇವೀಂದ್ರ ವಯೋನಿವೃತ್ತಿ ಬೀಳ್ಕೊಡುವ ಸಮಾರಂಭ
ಕಲಬುರಗಿ: ವಾರ್ತಾ ಇಲಾಖೆಯಲ್ಲಿ ತಾವು ಸಲ್ಲಿಸಿದ 27 ವರ್ಷಗಳ ಸೇವೆ ಅತ್ಯಂತ ಸ್ಮರಣೀಯ. ಈ ಇಲಾಖೆ ನನ್ನ ವ್ಯಕ್ತಿತ್ವವನ್ನೇ ರೂಪಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೋಣಿ ಹೇಳಿದರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ವಾಹನ ಚಾಲಕ ದೇವಿಂದ್ರ ಸಾಯಬಣ್ಣ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಸೇವಾ ಅವಧಿ ನೆನಪಿಸಿಕೊಂಡ ಅವರು, ಬಜೆಟ್​ ದೃಷ್ಟಿಯಿಂದ ವಾರ್ತಾ ಇಲಾಖೆ ಸಣ್ಣದಾಗಿ ಕಂಡರೂ, ಸಮಾಜದಲ್ಲಿ ಇದರ ಪ್ರಭಾವ ಅತ್ಯಂತ ದೊಡ್ಡದು. ಇಲ್ಲಿ ಡಿ ದರ್ಜೆ ನೌಕರರಿಂದ ಹಿಡಿದು ಉನ್ನತಾಧಿಕಾರಿಗಳು ಹಾಗೂ ಮಾಧ್ಯಮ ಮಿತ್ರರೆಲ್ಲರೂ ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸುತ್ತಾರೆ ಎಂದರು.
ಇಲಾಖೆ ನಿವೃತ್ತ ಉಪನಿರ್ದೇಶಕ ಬಸವರಾಜ ಪಾರಾ ಮಾತನಾಡಿ, ಸುದೀರ್ 24 ವರ್ಷಗಳ ಕಾಲ ಇಲಾಖೆಯಲ್ಲಿ ನಿಷ್ಠೆ ಹಾಗೂ ಶಿಸ್ತಿನಿಂದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಹಿರಿಯ ವಾಹನ ಚಾಲಕ ದೇವಿಂದ್ರಪ್ಪ ಅವರಿಗೆ ಇಲಾಖೆಯಿಂದ ಬೀಳ್ಕೊಡುಗೆ ನೀಡಿದ್ದು ಸಂತಸದ ಸಂಗತಿ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಮಾತನಾಡಿ, ಕಚೇರಿಯ ಸುದೀರ್ ಪ್ರಯಾಣ ಹಾಗೂ ಬೃಹತ್​ ಕಾರ್ಯಕ್ರಮಗಳ ಯಶಸ್ಸಿನಲ್ಲಿ ವಾಹನ ಚಾಲಕರ ಸಮಯಪ್ರೆ ಮತ್ತು ಅನುಭವ ಅತ್ಯಂತ ಮಹತ್ವದ್ದು. ಪ್ರಯಾಣದ ವೇಳೆ ವಾಹನ ಚಾಲಕ ದೇವೇಂದ್ರಪ್ಪ ಅವರು ತೋರಿದ ವೃತ್ತಿಪರತೆ ಸ್ಮರಣೀಯ ಎಂದರು.
ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್​ ಯಡ್ರಾಮಿ ಮಾತನಾಡಿ, ನೂರಾರು ಪತ್ರಕರ್ತರ ಪ್ರಯಾಣ, ಸಮಯ ನಿರ್ವಹಣೆ ಹಾಗೂ ಸುರಕ್ಷತೆಯನ್ನು ವಾಹನ ಚಾಲಕ ದೇವೇಂದ್ರ ಅವರು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ ಎಂದರು.
ರಸ್ತೆಯ ಸೂಕ್ಷ್ಮತೆಗಳು, ಸಚಿವರ ಹಾಗೂ ಗಣ್ಯರ ಭೇಟಿಯ ಸಮಯ ಗ್ರಹಿಸಿ ಪ್ರಯಾಣ ಯೋಜಿಸುವುದರಲ್ಲಿ ಚಾಲಕರ ಅನುಭವ ನಮಗೆಲ್ಲ ಸಹಾಯಕವಾಗಿದೆ. ಪತ್ರಕರ್ತರ ಸುರಕ್ಷತೆಯ ಜತೆಗೆ ನಂಬಿಗಸ್ಥ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಚಾಲಕರ ಸೇವೆ ಗೌರವಾರ್ಹವಾದುದು. ಹಿರಿಯ ಚಾಲಕರ ಈ ಸುದೀರ್ ಅನುಭವವು ಕಿರಿಯ ಸಿಬ್ಬಂದಿಗೆ ವೃತ್ತಿಪರತೆ ಬೆಳೆಸಿಕೊಳ್ಳಲು ಮಹತ್ತರ ಕೊಡುಗೆ ಎಂದರು.
ಇಲಾಖೆ ನಿವೃತ್ತ ಉಪನಿರ್ದೇಶಕ ಜಿ. ಚಂದ್ರಕಾಂತ, ವಾರ್ತಾ ಇಲಾಖೆ ಸಿಬ್ಬಂದಿ ಸೇರಿ ಪತ್ರಕರ್ತರು, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ಇಲಾಖೆಯ ರಾಜರತ್ನ, ಉಮಾಶಂಕರ, ಪಾಶಾ, ಪತ್ರಕರ್ತರು ಇತರರಿದ್ದರು. ದೇವಿಂದ್ರಪ್ಪ ದಂಪತಿಯನ್ನು ನೆನಪಿನ ಕಾಣಿಕೆಯೊಂದಿಗೆ ಸತ್ಕರಿಸಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.
"

ದೇವಿಂದ್ರಪ್ಪ ವಾರ್ತಾ ಇಲಾಖೆಗೆ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದಾರೆ, ಸಿಬ್ಬಂದಿ ಕೊರತೆ ಹಾಗೂ ಒತ್ತಡದ ನಡುವೆಯೂ ರಾತ್ರಿ - ಹಗಲೆನ್ನದೆ ಸಮಯ ಪಾಲನೆಯೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಇಲಾಖೆಯ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿನಲ್ಲಿ ಇವರ ಕೊಡುಗೆ ಅಪಾರ.

— ಬಸವರಾಜ ಪಾರಾ, ನಿವೃತ್ತ ಉಪನಿರ್ದೇಶಕ, ವಾರ್ತಾ ಇಲಾಖೆ.