ಗೌರಿಬಿದನೂರಲ್ಲಿ ಮುಂದುವರಿದ ಪಕ್ಷಾಂತರ ಪರ್ವ Gauribidanur
- ಶಾಸಕರ ಪುಟ್ಟಸ್ವಾಮಿ ಗೌಡ ಬಣಕ್ಕೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು
ಗೌರಿಬಿದನೂರು: ಕಾಂಗ್ರೆಸ್ನ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣಕ್ಕೆ ವಲಸೆ ಹೋಗುವ ಪರ್ವ ಕ್ಷೇತ್ರದಲ್ಲಿ ಮುಂದುವರಿಸಿದೆ. Gauribidanur
ಜಿಪಂ, ತಾಪಂ, ಗ್ರಾಪಂ ಸೇರಿ ಇತರ ಸ್ಥಳಿಯ ಸಂಸ್ಥೆಗಳ ಚುನಾವಣೆ ಘೋಷಣೆ ಹೊತ್ತಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯುತ್ತಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.
ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಮುಖಂಡ, ನಗರಸಭೆ ಮಾಜಿ ಸದಸ್ಯ, ಹಿರೇಬಿದನೂರು ಡೇರಿ ಅಧ್ಯಕ್ಷ ಡಿ.ಎನ್.ವೆಂಕಟರೆಡ್ಡಿ, ಕುರುಬರಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯರಾಘವ ರೆಡ್ಡಿ, ಬೆಂಬಲಿಗರೊಂದಿಗೆ ಶಾಸಕರ ಬಣಕ್ಕೆ ಸೇರ್ಪಡೆಯಾದರು.
ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಭಿವೃದ್ಧಿಪರ ನಿಲುವು ತತ್ವ&ಸಿದ್ಧಾಂತ ಮೆಚ್ಚಿ ಬರುವವರನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಪಕ್ಷಾತಿತವಾಗಿ ಬೆಂಬಲ ವ್ಯಕ್ತವಾಗುತ್ತಿರುವುದು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಕ್ಕೆ ಹುರುಪು ನೀಡಿದೆ ಎಂದರು.
ಹಿರೇಬಿದನೂರು ಡೇರಿ ಅಧ್ಯಕ್ಷ ಡಿ.ಎನ್.ವೆಂಕಟರೆಡ್ಡಿ ಮಾತನಾಡಿ, ಮುಂದೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಜತೆ ಸಾಗುತ್ತೇವೆ ಎಂದರು.
ಮಾಜಿ ಶಾಸಕಿ ಎನ್.ಜ್ಯೋತಿ ರೆಡ್ಡಿ ಮಾತನಾಡಿ, ಸರ್ಕಾರದಿಂದ ಅನುದಾನ ತರುವುದು ಎಷ್ಟು ಕಷ್ಟ ಎಂಬುದರ ಅರಿವು ಇದೆ. ಆದರೆ, ಪುಟ್ಟಸ್ವಾಮಿ ಗೌಡರು ಸವಾಲು ಮೆಟ್ಟಿನಿಂತು ಮುಖ್ಯಮಂತ್ರಿ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಕ್ಕೆ ಅನುದಾನ ತಂದು ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಶಾಸಕರ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಬಣದ ಶಕ್ತಿ ಹೆಚ್ಚಿಸಿದೆ ಎಂದರು.
ಮುಖಂಡ ಆರ್.ಅಶೋಕ್ ಕುಮಾರ್ ಮಾತನಾಡಿ, ತಾಲೂಕಿನ ಡಿ.ಪಾಳ್ಯ ರಾಮಚಂದ್ರಪುರ ಗ್ರಾಮ ಹೊಸೂರು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದಕ್ಕೆ ಶಾಸಕರ ಶ್ರಮವೇ ಕಾರಣ ಎಂದರು.
ಮುಖಂಡ ಜೆ.ಕಾಂತರಾಜು ಮಾತನಾಡಿ, ದಶಕಗಳಿಂದ ತುಳಿತಕ್ಕೊಳಗಾದವರಿಗೆ ಶಾಸಕರಿಂದ ಈಗ ಅವಕಾಶ ಸಿಗುತ್ತಿವೆ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ, ಮುಖಂಡರಾದ ಎಸ್.ಎಲ್.ಲಕ್ಷಿ$್ಮ ನಾರಾಯಣ ಶೆಟ್ಟಿ, ಬಿ.ಆರ್.ಶ್ರೀನಿವಾಸ ಮೂರ್ತಿ, ನರಸಿಂಹಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷಿ$್ಮನಾರಾಯಣಪ್ಪ, ನಗರಸಭೆ ಮಾಜಿ ಸದಸ್ಯರಾದ ಕೆ.ಎಸ್.ಅನಂತರಾಜು, ಕಲೀಮ್, ಅಮರ್ ಶೆಟ್ಟಿ, ರಾಜಕುಮಾರ್, ಸುಬ್ಬರಾಯಪ್ಪ ಇದ್ದರು.