ಕಲಬುರಗಿಯಲ್ಲಿ ತಳವಾರ ಸಮಾಜದ ಮುಖಂಡರ ಸಭೆಯನ್ನು ಗುರುವಾರ ನಡೆಸಿ, ಹೋರಾಟದ ಬಗ್ಗೆ ಚರ್ಚಿಸಲಾಯಿತು. 
ರಾಜ್ಯ

ಉಗ್ರ ಹೋರಾಟಕ್ಕೆ ತಳವಾರರ ನಿರ್ಧಾರ

ಕಲಬುರಗಿ: ತಳವಾರ ಸಮಾಜದವರಿಗೆ ಎಸ್​ಟಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದನ್ನು ಖಂಡಿಸುವ ಜತೆಗೆ ಸಚಿವ ಪ್ರಿಯಾಂಕ್​ ರ್ಖಗೆ ಮನೆಗೆ ಮುತ್ತಿಗೆ ಸೇರಿ ಉಗ್ರ ಹೋರಾಟಕ್ಕೆ ತಳವಾರ ಸಮಾಜದವರು ರ್ನಿಣಯಿಸಿದರು.
ಕೋಲಿ ಸಮಾಜದ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಹೋರಾಟದ ಸುದೀರ್ ಚರ್ಚೆ ನಡೆಸಿದ ಪ್ರಮುಖರು, ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಇರದ ಸಮಸ್ಯೆ ಕಲಬುರಗಿ, ಯಾದಗಿರಿಯಲ್ಲಿ ಉದ್ದೇಶಪೂರ್ವಕವಾಗಿ ಸಚಿವ ಪ್ರಿಯಾಂಕ್​ ರ್ಖಗೆ ಸೃಷ್ಟಿಸಿದ್ದಾರೆ. ಇದುವರೆಗೆ ಎಲ್ಲ ಶಾಸಕರ ಮನೆ ಎದುರು ಪ್ರತಿಭಟನೆ ನಡೆಸಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಇನ್ನಷ್ಟು ಬಲಿಷ್ಠವಾಗಿ ರೂಪಿಸಲಾಗುವುದು. ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು. ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ವ್ಯವಸ್ಥಿತವಾಗಿ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಯುತವಾಗಿ ತಳಮಟ್ಟದ ಸಮುದಾಯದವರು ಹೋರಾಟ ಮಾಡಿದರೆ ದಾಂಧಲೆ, ಹಲ್ಲೆ, ಆಸ್ತಿಪಾಸ್ತಿ ಹಾನಿಯ ಕೇಸ್​ ದಾಖಲಿಸಿದ್ದಾರೆ. ಆದರೆ ವಾಸ್ತವದಲ್ಲಿ ಪರವಾನಗಿ ಪಡೆದು ಹೊಡೆದಿದ್ದ ಟೆಂಟ್​ನ್ನು ಕಿತ್ತು ಹಾಕಿ, ಕಳವು ಮಾಡಿ ಪೊಲೀಸರೇ ಅನ್ಯಾಯ ಎಸಗಿದ್ದಾರೆ. ಸುಳ್ಳು ಕೇಸ್​ಗಳನ್ನು ಹೋರಾಟಗಾರರ ಮೇಲೆ ಹಾಕಿದ್ದು, ಹಿಂಪಡೆಯಬೇಕು, ಟೆಂಟ್​ ಹಾನಿ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು ಎಂದು ನಿರ್ಧರಿಸಲಾಯಿತು.
ಪ್ರಮುಖರಾದ ಸರ್ದಾರ್​ ರಾಯಪ್ಪ, ಅವ್ವಣ್ಣ ಮ್ಯಾಕೇರಿ, ಶಿವಕುಮಾರ ನಾಟೀಕಾರ, ರೇವಣಸಿದ್ದ ಕಮಾನಮನಿ, ಬಸವರಾಜ ಬೂದಿಹಾಳ, ವಸಂತರಾವ ನರಿಬೋಳ, ಶಂಕು ಮ್ಯಾಕೇರಿ, ರಾಜಕುಮಾರ ಉಕಲಿ, ರಮೇಶ ಜಮಾದಾರ, ರಾಕೇಶ ಜಮಾದಾರ, ಪ್ರೇಮ ಕೋಲಿ ಇತರರಿದ್ದರು.
ನಾಳೆ ಮತ್ತೊಮ್ಮೆ ಮೀಟಿಂಗ್​
ಮೇ ತಿಂಗಳ ಕೊನೇ ವಾರದಲ್ಲಿ ಜಿಲ್ಲೆಯಲ್ಲಿ ಬೃಹತ್​ ಹೋರಾಟ ರೂಪಿಸುವುದು, ಮತ್ತೆ ಧರಣಿ ಸತ್ಯಾಗ್ರಹ ಆರಂಭಿಸಲು ಸಭೆಯಲ್ಲಿ ರ್ನಿಣಯಿಸಲಾಗಿದೆ. ಸಮಾಜದ ಹಿರಿಯ ಮುಖಂಡರ ಮತ್ತೊಂದು ಸುತ್ತಿನ ಹೋರಾಟದ ಸಭೆಯನ್ನು ಶನಿವಾರ ನಡೆಸಲು ನಿರ್ಧರಿಸಲಾಯಿತು.
"

ತಳವಾರರಿಗೆ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ. ಸಚಿವ ಪ್ರಿಯಾಂಕ್​ ಖರ್ಗೆ ಸಂಪೂರ್ಣ ಸುಳ್ಳು ಹೇಳಿ, ಜನರ ದಾರಿ ತಪ್ಪಿಸುತ್ತಿದ್ದಾರೆ. ಬೋಯಾ ತಳವಾರ ನೀಡಿದ್ದೇವೆ ಎಂದು ಹೇಳುತ್ತಾರೆ. ನಮ್ಮ ಜಿಲ್ಲೆಯಲ್ಲಿ ಇಲ್ಲದ ಸಮಾಜಕ್ಕೆ ನೀಡುವುದು ಹೇಗೆ? ವ್ಯವಸ್ಥಿತವಾಗಿ ಸಮಾಜವನ್ನು ಹತ್ತಿಕ್ಕುವ ಕೆಲಸ ರ್ಖಗೆ ಮಾಡುತ್ತಿದ್ದು, ಅವರ ಮನೆಗೆ ಮುತ್ತಿಗೆ ಹಾಕಲಾಗುವುದು.

— > ಸರ್ದಾರ್​ ರಾಯಪ್ಪ, ಅಧ್ಯಕ್ಷ ತಳವಾರ ಸಮಾಜ