ಕೃಷ್ಣಮೃಗಗಳ ಸಾವು ಆಘಾತಕಾರಿ 
ರಾಜ್ಯ

ಸಂಪಾದಕೀಯ: ಕೃಷ್ಣಮೃಗಗಳ ಸಾವು ಆಘಾತಕಾರಿ

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ ಮೂರು ದಿನಗಳ ಅವಧಿಯಲ್ಲಿ 30 ಕೃಷ್ಣಮೃಗಗಳು ಸಾಲುಸಾಲಾಗಿ ಮೃತಪಟ್ಟಿರುವುದು ಕಳವಳದ ವಿಚಾರ. ನವೆಂಬರ್​ 13ರಂದು (ಗುರುವಾರ) ಎಂಟು ಕೃಷ್ಣಮೃಗಗಳು ನಿಗೂಢವಾಗಿ ಮೃತಪಟ್ಟಿರುವ ಸುದ್ದಿ ಬಂದಿತ್ತು. ಅದರ ಕಾರಣವನ್ನು ಆಗಲೇ ಪತ್ತೆ ಹಚ್ಚಿ, ಅಗತ್ಯ ಕ್ರಮ ಜರುಗಿಸಿದ್ದರೆ ಉಳಿದ ಕೃಷ್ಣಮೃಗಗಳನ್ನು ಉಳಿಸಲು ಸಾಧ್ಯವಿತ್ತು.
ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯ ಸೇರಿ ಮತ್ತಿತರ ಕಡೆಗಳಿಂದ 38 ಕೃಷ್ಣಮೃಗಗಳನ್ನು ತಂದು ಕಿರು ಮೃಗಾಲಯದಲ್ಲಿ ಇರಿಸಲಾಗಿತ್ತು. ಈಗ ಎಂಟು ಕೃಷ್ಣಮೃಗಗಳಷ್ಟೇ ಇಲ್ಲಿ ಉಳಿದಿವೆ. ಇಷ್ಟೊಂದು ಸಂಖ್ಯೆಯಲ್ಲಿ ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಆತಂಕ ಮೂಡಿಸಿರುವ ಜತೆಗೆ ಕಿರು ಮೃಗಾಲಯದ ನಿರ್ವಹಣೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಇದರಲ್ಲಿ ಸಂಬಂಧಪಟ್ಟ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ನಿಷ್ಪಪಾತ ತನಿಖೆ ನಡೆಸಿ ಸರ್ಕಾರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥ ಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಅವಡ ಸಂಭವಿಸಿದ ಬಳಿಕ ಪ್ರಾಣಿಗಳ ಆರೋಗ್ಯ ತಪಾಸಣೆಯ ಪ್ರಹಸನ ನಡೆಸುವುದನ್ನು ಬಿಟ್ಟು, ಕಾಲಕಾಲಕ್ಕೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಿದರೆ ಮತ್ತು ಅವುಗಳಿಗೆ ಸೂಕ್ತ ಆಹಾರ ಒದಗಿಸಿದರೆ ಈ ಬಗೆಯ ಸಮಸ್ಯೆ ಉದ್ಭವವಾಗುವುದಿಲ್ಲ.
ವನ್ಯಜಿವಿಗಳ ರಕ್ಷಣೆ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಂಭೀರವಾಗಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಮೃಗಾಲಯ, ವನ್ಯಜಿವಿಧಾಮಗಳ ಸಂರಕ್ಷಣೆ ನಿಟ್ಟಿನಲ್ಲಿ ರ್ನಿಲಕ್ಷ$್ಯ ಸಲ್ಲ. ಇತ್ತೀಚಿನ ದಿನಗಳಲ್ಲಿ ಆನೆ, ಹುಲಿ ಸೇರಿದಂತೆ ಹಲವು ಪ್ರಾಣಿಗಳು ಅಕಾಲಿಕವಾಗಿ ಮರಣ ಹೊಂದುತ್ತಿರುವುದು ಗಂಭೀರ ಸಂಗತಿ. ಚಾಮರಾಜನಗರ ಜಿಲ್ಲೆಯ ಹನೂರು ಬಳಿಯ ಮಲೆ ಮಹದೇಶ್ವರ ವನ್ಯಜಿವಿ ಧಾಮದ ಹೂಗ್ಯಂ ವಲಯದಲ್ಲಿ ಜುಲೈ 26ರಂದು ಐದು ಹುಲಿಗಳಿಗೆ ವಿಷಪ್ರಾಷನ ಮಾಡಿ ಕೊಲ್ಲಲಾಗಿತ್ತು. ಕಾಡಿನಲ್ಲಿ ಮೇಯಲು ಹೋಗಿದ್ದ ಹಸುವನ್ನು ತಿಂದು ಹಾಕಿದ್ದಕ್ಕೆ ಪ್ರತಿಕಾರವಾಗಿ ದುಷ್ಕರ್ಮಿಗಳು ಐದು ಹುಲಿಗಳಿಗೆ ವಿಷ ಹಾಕಿ ಕೊಂದಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂತು. ಹುಲಿಗಳ ವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಮಲೆ ಮಹದೇಶ್ವರ ವನ್ಯಜಿವಿ ಧಾಮವನ್ನು ಹುಲಿ ಸಂರತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್​ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಶಿಾರಸು ಮಾಡಿದೆ. ಇದರ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಆನೆಗಳು ಒಂದು ಪ್ರದೇಶದಿಂದ ಮತ್ತೊಂದೆಡೆ ಸಾಗುವಾಗ ವಿದ್ಯುತ್​ ಸ್ಪರ್ಶಿಸಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಆನೆಮರಿಗಳ ಸಾವಿನ ಪ್ರಮಾಣವೂ ಹೆಚ್ಚುತ್ತಿರುವುದು ಕಳವಳಕಾರಿ. ವನ್ಯಜಿವಿಗಳ ರಕ್ಷಣೆಯ ನಿಟ್ಟಿನಲ್ಲಿ ಬದ್ಧತೆ ಮತ್ತು ಇಚ್ಛಾಶಕ್ತಿ ಅಗತ್ಯ ಎಂಬುದನ್ನು ಮನಗಾಣಬೇಕು. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾದ ವೇಗದಲ್ಲಿ ಸಾಗುತ್ತಿಲ್ಲ ಎಂಬುದು ಕಹಿಸತ್ಯ. ಪಶ್ಚಿಮ ಟ್ಟ ಪ್ರದೇಶ ನೈಸರ್ಗಿಕ ಸಿರಿಗೆ ಹೆಸರುವಾಸಿಯಾಗಿದ್ದರೂ, ಇಲ್ಲಿಯೂ ವನ್ಯಜಿವಿಗಳು ಸುರತವಾಗಿಲ್ಲ. ಹಾಗಾಗಿ, ವನ್ಯಜಿವಿಗಳ
ರಕ್ಷಣೆ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಮರ್ಥ, ದಕ್ಷ ಅಧಿಕಾರಿಗಳನ್ನು ಇದಕ್ಕಾಗಿ ನಿಯೋಜಿಸಬೇಕು.