ಬೈಲಹೊಂಗಲ ನಗರದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರವಿಣ ಜೈನ, ಎಚ್​.ಎನ್​.ಶಿರಹಟ್ಟಿ, ಡಾ.ವೀರಯ್ಯ ಹಿರೇಮಠ, ಪ್ರಮೋದ ಯಲಿಗಾರ ಇತರರಿದ್ದರು. 
ರಾಜ್ಯ

ರಾಷ್ಟ್ರದ ಭವಿಷ್ಯ ಪ್ರತಿಬಿಂಬಿಸುವ ದಿವಸ

ಬೈಲಹೊಂಗಲ: ಗಣರಾಜ್ಯೋತ್ಸವ ಆಚರಣೆ ಮಾತ್ರವಲ್ಲದೇ ರಾಷ್ಟ್ರದ ಭವಿಷ್ಯ ಪ್ರತಿಬಿಂಬಿಸುವ ಸ್ಮರಣೆಯ ದಿನವಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರವಿಣ ಜೈನ ಹೇಳಿದರು.
ನಗರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ತಾಲೂಕಾಡಳಿತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜನತೆಗೆ ದೇಶಾಭಿಮಾನ, ರಾಷ್ಟ್ರೀಯತೆ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸಂದೇಶ ನೀಡುವ ದಿನವಾಗಿದೆ. ರಾಷ್ಟ್ರದ ಪ್ರಗತಿ, ಅಭಿವೃದ್ಧಿ, ಸವಾಲು ಮತ್ತು ಭವಿಷ್ಯದ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂದೇಶ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರವರ ಸಂವಿಧಾನವನ್ನು ಪ್ರತಿಯೊಬ್ಬರು ಪಾಲನೆ ಮಾಡಿದರೆ ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯ. ಯುವಕರು ದೇಶ ಪ್ರೇಮ ಮೈಗೂಡಿಸಿ ಸ್ವಾಬಲಂಬಿ ಬದುಕು ಕಟ್ಟಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.
ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ, ಡಿವೈಎಸ್​ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ತಾಪಂ ಇಒ ಸಂಜೀವ ಜುನ್ನೂರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯ ಡಾ.ಮಹಾಂತೇಶ ಕಳ್ಳಿಬಡ್ಡಿ, ಅಬಕಾರಿ ಅಧಿಕಾರಿ ಶ್ರೀಶೈಲ ಅಕ್ಕಿ, ಶಾಹಿನ ಅಕ್ತರ್​, ಎಡಿಎಲ್​ಆರ್​ ಹೊಸಕೇರಿ, ಶಿಕ ರಾಜು ಹಕ್ಕಿ, ಜಿ.ವೈ.ಕಾಂಬಳೆ, ಬಸವರಾಜ ಭರಮನ್ನವರ, ಮಹೇಶ ಹೂಲಿ ಇತರರಿದ್ದರು.