ಎಮ್ಮೆನತ್ತದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಭೂಮಿಪೂಜೆ Kolar 
ರಾಜ್ಯ

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ. Kolar

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿಕೆ
  • ಎಮ್ಮೆನತ್ತದಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ
ಮುಳಬಾಗಿಲು: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. Kolar ರಾಜಕೀಯ ರಹಿತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದರೆ ಮಾಜಿ ಶಾಸಕ ದಿ.ಜೆ.ಎಂ.ರೆಡ್ಡಿ ಅವರ ಹುಟ್ಟೂರು ಎಮ್ಮೆನತ್ತ ಗ್ರಾಮದಲ್ಲಿ ಹೈಟೆಕ್​ ವೃತ್ತ ನಿರ್ಮಿಸುವುದಾಗಿ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.
ತಾಲೂಕಿನ ಎಮ್ಮೆನತ್ತ ಗ್ರಾಮದಲ್ಲಿ ಭಾನುವಾರ ನರೇಗಾ ಯೋಜನೆಯಡಿ ನೂತನವಾಗಿ ನಿರ್ಮಿಸಲಾದ ಗ್ರಾಪಂ ಕಾರ್ಯಾಲಯ ಲೋಕಾರ್ಪಣೆ ಮತ್ತು ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್​ ಅಂಗನವಾಡಿ ಕೇಂದ್ರ ನಿಮಾರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಪಂ ನೂತನ ಕಟ್ಟಡ ನಿಮಾರ್ಣಕ್ಕೆ ರಾಜಕೀಯ ಕಾರಣಗಳಿಂದಾಗಿ ನನ್ನನ್ನು ಆಹ್ವಾನಿಸದೆ ನರೇಗಾ ಯೋಜನೆಯಲ್ಲಿ ನಿರ್ಮಿಸಿದ್ದಾರೆ. ಆದರೆ ಈಗ ರಾಜಕೀಯ ಬದಿಗಿರಿಸಿ ಆಹ್ವಾನಿಸುವುದು ಉತ್ತಮ ಬೆಳವಣಿಗೆ. ಕಟ್ಟಡದ ಮುಂದುವರೆದ ಕಾಮಗಾರಿಗೆ 15 ಲಕ್ಷ ರೂ. ಶಾಸಕಕರ ಅನುದಾನದಲ್ಲಿ ನೀಡುವ ಜತೆಗೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಲಾಗುವುದು ಎಂದು ಭರವಸೆ ನೀಡಿದರು.
ಎಮ್ಮೆನತ್ತ, ಮೇಲಾಗಾಣಿ, -ರಾಮರಾಯನ ಕೋಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಎಮ್ಮೆನತ್ತ ಮತ್ತು ಪದಕಾಷ್ಠಿ ಗ್ರಾಮದಲ್ಲಿ ಹೈಮಾಸ್ಟ್​ ಬೀದಿ ದೀಪಗಳನ್ನು ಅಳವಡಿಸಲು ಶ್ರೀ ಕಾಮಗಾರಿ ಆರಂಭಿಸಲಾಗುವುದು. ತಾಲೂಕಿನಲ್ಲಿ 5 ಹೈಟೆಕ್​ ಅಂಗನವಾಡಿ ನಿಮಾರ್ಣಕ್ಕೆ ಈಗಾಗಲೇ ಸರ್ಕಾರದಿಂದ ತಲಾ 20 ಲಕ್ಷದಂತೆ 1 ಕೋಟಿ ರೂ. ಬಿಡುಗಡೆಯಾಗಿದ್ದು, ಆವಣಿ ಗ್ರಾಮದಲ್ಲೂ ಸಹ ಅಂಗನವಾಡಿ ನಿಮಾರ್ಣ ಕಾಮಗಾರಿ ಆರಂಭವಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಕೇಂದ್ರದಿಂದ ಜಿಲ್ಲೆಗೆ ಅನುದಾನ: ತಾಲೂಕಿನಲ್ಲಿ ರಾಜಕೀಯವನ್ನು ಸೌಹಾರ್ದವಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದು ಇತರ ತಾಲೂಕಿಗೆ ಮಾದರಿ. ರಾಜ್ಯಕ್ಕೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವು ಯೋಜನೆಗಳು ನೇರವಾಗಿ ಕೋಲಾರ ಸಂಸದರ ಕ್ಷೇತ್ರಕ್ಕೆ ಬರುತ್ತಿದ್ದು, ಉಳಿದಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್​ ಬಾಬು ತಿಳಿಸಿದರು.
ಕಾಂಗ್ರೆಸ್​ ಹಿರಿಯ ಮುಖಂಡ ಜಿ.ರಾಮಲಿಂಗಾರೆಡ್ಡಿ ಮಾತನಾಡಿ, ಮುಳಬಾಗಿಲು, ತಾಯಲೂರು ಮಾರ್ಗವಾಗಿ ವಿ.ಕೋಟ ರಸ್ತೆಯನ್ನು ಈ ಹಿಂದೆ ಘೋಷಿಸಿದಂತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅನುಷ್ಠಾನಗೊಳಿಸಿ ಅಭಿವೃದ್ಧಿ ಮಾಡಿಸಬೇಕೆಂದು ಒತ್ತಾಯಿಸಿದರು.
ಕೋಚಿಮುಲ್​ ಮಾಜಿ ನಿರ್ದೇಶಕ ಆರ್​.ಆರ್​.ರಾಜೇಂದ್ರಗೌಡ ಮಾತನಾಡಿ, ಕೋಲಾರ, ಮುಳಬಾಗಿಲು ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಾದ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳು ಕುಂಠಿತಗೊಂಡಿದ್ದು, ಸಂಚಾರಕ್ಕೆ ತೊಂದರಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ಮತ್ತು ಪ್ರಯಾಣಿಕರ ರಕ್ಷಣೆಗೆ ತ್ವರಿತವಾಗಿ ಕಾಮಗಾರಿ ಮುಗಿಸಲು ಹೆದ್ದಾರಿ ಸಚಿವರು ಮತ್ತು ಅಧಿಕಾರಿಗಳ ಗಮನ ಸೆಳೆಯಬೇಕೆಂದು ಸಂಸದರಿಗೆ ಮನವಿ ಮಾಡಿದರು.
ಉತ್ತನೂರು ವಿಎಸ್ಸೆಸ್ಸೆನ್​ ಅಧ್ಯಕ್ಷ ಗುಜ್ಜನಹಳ್ಳಿ ಆರ್​.ಮಂಜುನಾಥ್​, ಸಹಕಾರ ಯೂನಿಯನ್​ ನಿರ್ದೇಶಕ ಬಂಡಹಳ್ಳಿ ಲಕ್ಷಿ$್ಮ ನಾರಾಯಣ, ರೈತ ಮುಖಂಡ ಎಂ.ಗೋಪಾಲ್​, ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎನ್​.ವೆಂಕಟೇಶಗೌಡ, ತಾಪಂ ಇಒ ರವಿಚಂದ್ರ, ಎಮ್ಮೆನತ್ತ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಹನುಮಪ್ಪ, ಮಾಜಿ ಅಧ್ಯಕ್ಷ ಕೆ.ನಾಗರಾಜರೆಡ್ಡಿ, ಉಪಾದ್ಯಕ್ಷೆ ಕಸ್ತೂರಿ ರವಿ, ಸದಸ್ಯರಾದ ಸುಮಾ ಅಂಬರೀಶ್​, ವಿಶ್ವನಾಥ ರೆಡ್ಡಿ, ಮಂಜುನಾಥ್​, ನಾರಾಯಣಸ್ವಾಮಿ, ಪಿಡಿಒ ಸುಜಾತಮ್ಮ, ತಾಪಂ ಮಾಜಿ ಅಧ್ಯೆ ಶಾಂತಮ್ಮ ವೆಂಕಟೇಶ್​ ಇದ್ದರು.