- ರಾಜಕೀಯ ಕ್ಷೇತ್ರದಲ್ಲಿ ಎಚ್‌ಡಿಡಿ ಆಲದ ಮರ ಇದ್ದಂತೆ
- ನನ್ನಂತ ಸಾಕಷ್ಟೂ ರಾಜಕಾರಣಿಗಳನ್ನು ರಾಜಕೀಯ ನೆರಳಾಗಿ ಬೆಳೆಸಿದ್ದಾರೆ
- ಎಂಎಲ್ಸಿ ಟಿ. ಎನ್. ಜವರಾಯಿಗೌಡ ಹೇಳಿಕೆ
ಬೆಂಗಳೂರು: ಹಲವು ಕಠಿಣ ಸವಾಲುಗಳನ್ನು ಎದುರಿಸಿ ಜೆಡಿಎಸ್ ಕಟ್ಟಿ ಬೆಳೆಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಾಮರ್ಥ್ಯ ದೇಶಕ್ಕೆ ಗೊತ್ತಿದೆ.ಪಕ್ಷಗಾಗಿ ಇಳಿವಯಸ್ಸಿನಲ್ಲೂ ಅವರು ದುಡಿಯುತ್ತಿದ್ದಾರೆ ಎಂದು ಎಂಎಲ್ಸಿ ಟಿ. ಎನ್. ಜವರಾಯಿಗೌಡ, ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ 25ನೇ ವರ್ಷದ ರಜತ ಮಹೋತ್ಸವ ನಿಮಿತ್ತ ಯಶವಂತಪುರ ವಾರ್ಡ್‌ನ ಅಂದರಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಎಚ್‌ಡಿಡಿ ಆಲದ ಮರ ಇದ್ದಂತೆ. ನನ್ನಂತ ಸಾಕಷ್ಟೂ ರಾಜಕಾರಣಿಗಳನ್ನು ರಾಜಕೀಯ ನೆರಳಾಗಿ ಬೆಳೆಸಿದ್ದಾರೆ. ನಮ್ಮ ಪಕ್ಷದಿಂದ ರಾಜಕೀಯ ಶಕ್ತಿ ಪಡೆದ ಹಲವರು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಆದರೂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎದೆಗುಂದದೆ ರಾಜ್ಯದಲ್ಲಿ ಇನ್ನಷ್ಟು ಸಧೃಡವಾಗಿ ಪಕ್ಷವನ್ನು ಬೆಳೆಸುತ್ತಿದ್ದಾರೆ ಎಂದರು.
ಜೆಡಿಎಸ್ ಯುವ ಮುಖಂಡರಾದ ಸಂತೋಷ್ ಜವರಾಯೀಗೌಡ, ಹನುಮಂತೇಗೌಡ, ಅಜಯ್, ಸತೀಶ್, ಚೆಲುವರಾಜ್, ಜೆಡಿಎಸ್ ಮಹಿಳಾ ಅಧ್ಯಕ್ಷೆ ಸಾಕಮ್ಮ, ಟ್ರಾವೆಲ್ಸ್ ಮಂಜು, ಅರುಣ್ ಕುಮಾರ್, ನಂದೀಶ್, ಮರೇಗೌಡ ಇದ್ದರು.