ಕುಲಪತಿ ಡಾ. ಬಿ. ಎನ್.ಸುರೇಶ 
ರಾಜ್ಯ

ಸೈನಿಕರಿಂದ ದೇಶ ಸುರಕ್ಷಿತ: ಡಾ. ಬಿ. ಎನ್.ಸುರೇಶ ಹೇಳಿಕೆ- country is safe

ಬೆಂಗಳೂರು: ರಕ್ಷಣಾ ವ್ಯವಸ್ಥೆ ಮತ್ತು ವಿಜ್ಞಾನ-ತಂತ್ರಜ್ಞಾನಗಳ ನಡುವೆ ಅವಿನಾಭಾವ ಸಂಬಂಧವಿದೆ. ಇಂದಿಗೂ ನಮ್ಮ ಸ್ವಾತಂತ್ರ್ಯ ಸುರಕ್ಷಿತವಾಗಿದೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಭಾರತೀಯ ಬಾಹ್ಯಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ ಕುಲಪತಿ ಡಾ. ಬಿ. ಎನ್.ಸುರೇಶ ಹೇಳಿದ್ದಾರೆ.

ಮಾರತ್ತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ‘ಮಾ ದುರ್ಗಾ-ಮಹಾಶಕ್ತಿ’ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಿದ್ದ ಕಲಾ ಉತ್ಸವದಲ್ಲಿ ಮಾತನಾಡಿದರು.
ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಗಗನ್ ದೀಪ್ ಬಕ್ಷಿ(ಜಿ.ಡಿ.ಬಕ್ಷಿ) ಅವರು ಭಾರತೀಯ ಸೈನ್ಯಕ್ಕೆ ನೀಡಿದ ಕೊಡುಗೆ ಅತ್ಯಂತ ಸ್ಮರಣೀಯವಾದುದು. ದೇಶದ ರಕ್ಷಣಾ ವ್ಯವಸ್ಥೆ ಬಲಗೊಳ್ಳಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ಸಾಹವನ್ನು ಸಕಾರಾತ್ಮಕ ಚಟುವಟಿಕೆಗಳಿಗೆ ಬಳಸಿ ದೇಶವನ್ನು ಸಮೃದ್ಧಗೊಳಿಸಬೇಕು ಎಂದರು.
ವಾಗ್ದೇವಿ ವೀರ ರತ್ನ ಪುರಷ್ಕಾರ ಸ್ವೀಕರಿಸಿ ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಗಗನ್ ದೀಪ್ ಬಕ್ಷಿ ಮಾತನಾಡಿ, ದೇಶದ ಭದ್ರತೆ ಮತ್ತು ಸಾರ್ವಭೌಮತ್ವ ಬಲಪಡಿಸುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದಾಗಿದೆ. ರಾಷ್ಟ್ರಸೇವೆಯ ಉತ್ಕಟ ಹಂಬಲ ಹೊಂದಿರುವ ಹೆಚ್ಚಿನ ಸಂಖ್ಯೆಯ ಯುವಕರು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗಬೇಕು. ದೇಶದ ಭದ್ರತೆ ಕೇವಲ ಗಡಿಯಲ್ಲಿ ನಿಂತಿರುವ ಸೈನಿಕರ ಹೊಣೆಗಾರಿಕೆಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಯುವಶಕ್ತಿ ರಾಷ್ಟ್ರದ ಅತ್ಯಂತ ದೊಡ್ಡ ಸಂಪತ್ತು. ಯುವಕರು ದೇಶದ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
ಪದ್ಮಭೂಷಣ ಮತ್ತು ಶತಾವಧಾನಿ ಡಾ.ಆರ್. ಗಣೇಶ್ ಸೇರಿ ಮತ್ತಿತರರಿದ್ದರು.