ಹೊಸಕೋಟೆಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಆವರಣದಲ್ಲಿ ಬಿಡಿಸಿಸಿ ಬ್ಯಾಂಕ್​ ಹಾಗೂ ಜಿಲ್ಲಾ ಸಹಕಾರ ಯೂನಿಯನ್​ಗೆ ಆಯ್ಕೆಯಾದ ಸಹಕಾರ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ಬಾವಾಪುರ ವೆಂಕಟೇಶ್​, ಕೃಷ್ಣಮೂರ್ತಿ, ಸಂದ ಸಿಇಒ ನಾರಾಯಣ್​ ಎಸ್​, ಅಧ್ಯಕ್ಷ ಸತೀಶ್​, ಉಪಾಧ್ಯಕ್ಷ ಅಪ್ಪಯ್ಯ ಇದ್ದರು. 
ರಾಜ್ಯ

ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಸಹಕಾರ ಸಂದ ಏಳಿಗೆ / HOSAKOTE

ಹೊಸಕೋಟೆ : ಸಹಕಾರ ಸಂಗಳು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಸಂಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹಕಾರ ಅತ್ಯಗತ್ಯ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಬಾವಾಪುರ ವೆಂಕಟೇಶ್​ ತಿಳಿಸಿದರು.
ಬಿಡಿಸಿಸಿ ಬ್ಯಾಂಕ್​ಗೆ ಆಯ್ಕೆಯಾದ ಕೃಷ್ಣಮೂರ್ತಿ, ವೆಂಕಟೇಶ್​ ಹಾಗೂ ಜಿಲ್ಲಾ ಸಹಕಾರ ಯೂನಿಯನ್​ಗೆ ಆಯ್ಕೆಯಾದ ರಮೇಶ್​, ಸುನಿಲ್​, ರಾಮಚಂದ್ರ ಅವರಿಗೆ ನಗರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸಹಕಾರ ಸಂಗಳ ಪೈಕಿ ಹೊಸಕೋಟೆ ತಾಲೂಕಿನಲ್ಲಿರುವ ಸಹಕಾರ ಸಂಗಳು ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಕೀಯ ಬದಿಗೊತ್ತಿ, ಸಹಕಾರ ಸಂದ ಧ್ಯೇಯೋದ್ದೇಶಗಳಿಗೆ ಬದ್ದರಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಿ ರೈತರಿಗೆ, ಹೈನೋದ್ಯಮಿಗಳಿಗೆ ಅಗತ್ಯ ನೆರವನ್ನು ಒದಗಿಸುವ ಕೆಲಸ ಮಾಡಬೇಕು ಎಂದರು.
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯಕ್ಷ ಕೆ.ಸತೀಶ್​ ಮಾತನಾಡಿ, ಸಹಕಾರ ಸಂಕ್ಕೆ ಆಯ್ಕೆಯಾದ ಪ್ರತಿಯೊಬ್ಬರೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸಬೇಕು ಎಂದರು. ಸಂದ ನಿರ್ದೇಶಕರಾದ ರಾಜಗೋಪಾಲ್​, ರಾಮಚಂದ್ರಪ್ಪ, ಸುಬ್ರಮಣಿ, ಗಣೇಶ್​, ಮುನಿಯಪ್ಪ, ವೆಂಕಟೇಶ್​, ಸುಜಾತಾ, ರಂಜನ, ರಾಜಪ್ಪ, ಜಯಪ್ರಕಾಶ್​, ಚನ್ನಭೈರೇಗೌಡ ಇದ್ದರು.
"

ಬಿಡಿಸಿಸಿ ಬ್ಯಾಂಕ್​ನಲ್ಲಿ ಹುದ್ದೆಗಳನ್ನು ಪಡೆಯಲು ತೀವ್ರ ಹೋರಾಟ ಮಾಡಬೇಕಿದೆ. ಹೊಸಕೋಟೆ ತಾಲೂಕಿನಿಂದ ನಾನು ಮೂರನೇ ಬಾರಿಗೆ ನಿರ್ದೇಶಕನಾಗಲು ಶಾಸಕ ಶರತ್​ ಬಚ್ಚೇಗೌಡರೇ ಅಖಾಡಕ್ಕಿಳಿದ್ದು ಸ್ಥಾನಕ್ಕಾಗಿ ಶ್ರಮಿಸಿದ್ದಾರೆ. ಆದ್ದರಿಂದ ಸಿಕ್ಕ ಅವಕಾಶದಿಂದ ರೈತರನ್ನು ಆರ್ಥಿಕವಾಗಿ ಮೇಲೆಕ್ಕೆತ್ತುವ ಮೂಲಕ ಶಾಸಕ ಶರತ್​ ಬಚ್ಚೇಗೌಡರಿಗೂ ಹೆಸರು ತಂದು ಅವರ ಕೈ ಬಲಪಡಿಸುವೆ.