ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆಯ ಸರ್ವಸದಸ್ಯರ ಸಭೆಯಲ್ಲಿ ಉಪಲೋಕಾಯುಕ್ತ ಕೆ.ಎಸ್.ಪಣೀಂದ್ರ ಪಾಲ್ಗೊಂಡಿದ್ದರು. ಜಿ.ಎಸ್.ಲಕ್ಷ್ಮೀನಾರಾಯಣ ರಾವ್,ಟಿ.ಎನ್. ನಾಗರಾಜರಾವ್ ಮತ್ತಿತರರಿದ್ದರು 
ರಾಜ್ಯ

ರಾಷ್ಟ್ರಕ್ಕೆ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರ; ಉಪಲೋಕಾಯುಕ್ತ ಕೆ.ಎಸ್.ಪಣೀಂದ್ರ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ
  • ಉಪಲೋಕಾಯುಕ್ತ ಕೆ.ಎನ್.ಪಣೀಂದ್ರ ಬಣ್ಣನೆ
  • ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾ ಸಭೆ

ಬೆಂಗಳೂರು:ಉತ್ತಮ ಸಮಾಜನಿರ್ಮಾಣದಲ್ಲಿ ಬ್ರಾಹ್ಮಣರಕೊಡುಗೆ ಅಪಾರ.ಸ್ವಾವಲಂಬನೆಹಾಗೂ ಸಂಸ್ಕಾರಕ್ಕೆ ಈ ಸಮುದಾಯಹೆಚ್ಚಿನ ಆದ್ಯತೆ ನೀಡುತ್ತಿದೆ.ಅದರಲ್ಲೂಉಲುಚುಕಮ್ಮೆ ಪಂಗಡದ ಅನೇಕ ಮಹನೀಯರುವಿವಿಧ ಕ್ಷೇತ್ರಗಳಲ್ಲಿ ಹಾಗೂದೇಶವಿದೇಶಗಳಲ್ಲಿ ತಮ್ಮದೇಹೆಜ್ಜೆಗುರುತುಗಳನ್ನು ಮೂಡಿಸಿಪ್ರಖ್ಯಾತರಾಗಿದ್ದಾರೆ ಎಂದುಉಪಲೋಕಾಯುಕ್ತ ಕೆ.ಎನ್.ಪಣೀಂದ್ರತಿಳಿಸಿದ್ದಾರೆ

ಉಲುಚುಕಮ್ಮೆಬ್ರಾಹ್ಮಣ ಸಭಾ ಆಯೋಜಿಸಿದ್ದಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.

ಬ್ರಾಹ್ಮಣರುಸಂಖ್ಯೆಯಿಂದ ಅಲ್ಪಸಂಖ್ಯಾತರಾದರೂಬುದ್ಧಿವಂತಿಕೆ ಮತ್ತು ಪ್ರತಿಭೆಯಲ್ಲಿಬಹುಸಂಖ್ಯಾತರು.ಇಂತಹ ಸಮಾಜದಯುವಶಕ್ತಿ ರಾಜಕೀಯ ಮತ್ತುಆಡಳಿತದಲ್ಲಿ ಮುಂಚೂಣಿಗೆಬರಬೇಕಾಗಿದೆ.ಉಲುಚುಕಮ್ಮೆಬ್ರಾಹ್ಮಣ ಸಂಘ ಅಂದು ಚಿಕ್ಕಸಂಸ್ಥೆಯಾಗಿ ಹುಟ್ಟಿ ಇಂದುಹೆಮ್ಮರವಾಗಿ ಬೆಳೆದಿದೆ.ನಾನು ಎಂಬುದನ್ನುಬಿಟ್ಟು ನಾವು ಎಂಬ ಮನೋಭಾವನೆಬೆಳೆಸಿಕೊಳ್ಳಬೇಕು.ಬ್ರಾಹ್ಮಣ ಸಮುದಾಯಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯಮಟ್ಟದಲ್ಲಿ ಹೆಚ್ಚು ಕ್ರಿಯಾಶೀಲವಾಗಿಬೆಳೆಯುತ್ತಿರುವುದು ಹೆಮ್ಮೆಯವಿಷಯ ಎಂದು ಪಣೀಂದ್ರ ವಿವರಿಸಿದರು.

ಈಸಂದರ್ಭದಲ್ಲಿ ಸಮಾಜದ ವಿವಿಧಕ್ಷೇತ್ರದಲ್ಲಿ ಉತ್ತಮ ಸಾಧನೆಮಾಡಿದ 24 ಸಾಧಕರನ್ನು ಸನ್ಮಾನಿಸಲಾಯಿತು. ಹಾಗೂ ಎಸ್‌ಎಸ್‌ಎಲ್‌ಸಿ,ಪಿಯುಸಿ,ಪದವಿ ಪರೀಕ್ಷೆಗಳಲ್ಲಿಅತ್ಯಧಿಕ ಅಂಕಗಳನ್ನು ಗಳಿಸಿದಸಮುದಾಯದ 68ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿಮಹಾಸಭೆಯ ಅಧ್ಯಕ್ಷ ಜಿ.ಎಸ್.ಲಕ್ಷ್ಮೀನಾರಾಯಣರಾವ್, ಉಪಾಧ್ಯಕ್ಷಟಿ.ಎನ್.ನಾಗರಾಜರಾವ್,ಕಾರ್ಯದರ್ಶಿವೈ.ಜಿ.ಮುರಳೀಧರ ಮತ್ತಿತರಸಮಾಜದ ಮುಖಂಡರು ಉಪಸ್ಥಿತರಿದ್ದರು