ಸುರಪುರ ತಾಲೂಕಿನ ದೇವಪುರದ ಶ್ರೀ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಹಮ್ಮಿಕೊಂಡ ಪುರಾಣ ಕಾರ್ಯಕ್ರಮವನ್ನು ಜಾಲಹಳ್ಳಿ ಶ್ರೀಮಠದ ಜಯಶಾಂತಲಿಂಗ ಶಿವಾಚಾರ್ಯರು ಚಾಲನೆ ನೀಡಿದರು. ಡಾ.ರಾಜಶೇಖರ ಶಿವಾಚಾರ್ಯ, ಡಾ.ರೇವಣಸಿದ್ದ ಶಿವಾಚಾರ್ಯ, ಶಿವಮೂರ್ತಿ ಶಿವಾಚಾರ್ಯ ಇತರರಿದ್ದರು. 
ರಾಜ್ಯ

ಮಠ-ಮಂದಿರಗಳ ಕೊಡುಗೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಜಾಲಹಳ್ಳಿಯ ಜಯಶಾಂತಲಿಂಗ ಶ್ರೀ ಅಭಿಮತ
  • ದೇವಪುರ ಮಠದಲ್ಲಿ ಪುರಾಣ ಆರಂಭ
ಸುರಪುರ : ಮಠ, ಮಂದಿರಗಳು ಮಾನವ ಕುಲಕ್ಕೆ ಾನ, ಸಂಸ್ಕಾರ, ಶಾಂತಿ, ನೆಮ್ಮದಿ, ಶೈಣಿಕ, ಧಾರ್ಮಿಕ ಮತ್ತು ಸಾಮಾಜಿಕ ಪರಿಕಲ್ಪನೆ ಬಿತ್ತುವ ತಾಣಗಳಾಗಿವೆ ಎಂದು ಜಾಲಹಳ್ಳಿ ಮಠದ ಶ್ರೀ ಜಯಶಾಂತಲಿಂಗ ಶಿವಾಚಾರ್ಯರು ನುಡಿದರು.
ತಾಲೂಕಿನ ದೇವಪುರ ಗ್ರಾಮದ ಶ್ರೀ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡ ಶ್ರೀ ಅಜಾತ ನಾಗಲಿಂಗ ಶರಣರ ಪುರಾಣ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಶಿಣ, ಧರ್ಮ ಜಾಗೃತಿ, ದಾಸೋಹ ಪರಂಪರೆ ಸಾರುವಲ್ಲಿ ಮಠಗಳ ಪಾತ್ರ ತುಂಬಾ ಹಿರಿದಾಗಿದೆ ಎಂದರು.
ಮಠ&ಮಾನ್ಯಗಳು ಸಾಮಾಜಿಕ ಕಳಕಳಿ ಬಿಂಬಿಸುತ್ತವೆ. ಭಕ್ತರೆ ಮಠದ ಆಸ್ತಿ. ಗುರು, ಶಿಷ್ಯರ ಸಂಬಂಧ ಅನನ್ಯ. ಗುರುವಿನ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಶಿಣದ ಜತೆ ಧರ್ಮ, ಸಂಸತಿ, ಸಂಸ್ಕಾರದ ಅರಿವು ಮೂಡಿಸಬೇಕು. ಅಧ್ಯಾತ್ಮಿಕ, ಪುರಾಣ ಪ್ರವಚನಗಳು ಪ್ರತಿಯೊಬ್ಬರ ಜೀವನಕ್ಕೂ ಬೆಳಕು ನೀಡಬಲ್ಲವು. ಪುರಾಣ ಪ್ರವಚನದಿಂದ ಸನ್ಮಾರ್ಗ ಸಾಧ್ಯ. ಮನಸ್ಸಿನ ನೆಮ್ಮದಿಗೆ ಪ್ರವಚನ ಔಷಧವಾಗಬಲ್ಲದು. ಮಾನವೀಯ ಮೌಲ್ಯಗಳನ್ನು ಅರಿತು ಮಹಾತ್ಮರು ತಿಳಿಸಿಕೊಟ್ಟಂತಹ ಮಾರ್ಗದಲ್ಲಿ ನಡೆಯಬೇಕು ಎಂದರು.
ಕಲಬುರಗಿ ಚೌವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯ, ಸರಡಗಿ ಹಿರೇಮಠದ ಡಾ.ರೇವಣಸಿದ್ದ ಶಿವಾಚಾರ್ಯರು ಮಾತನಾಡಿದರು. ದೇವಪುರ ಶ್ರೀ ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯರು ಅಧ್ಯತೆ ವಹಿಸಿದ್ದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯ ಸುರೇಶ ಸಜ್ಜನ್​, ಕೋನಾಳ, ದೇವಪುರ, ಬಾಚಿಮಟ್ಟಿ ಗ್ರಾಮಗಳ ಗುರು, ಹಿರಿಯರು ವೇದಿಕೆಯಲ್ಲಿದ್ದರು. ನಾಗಯ್ಯಶಾಸಿ ವಡಗೇರಾ ಅವರು ಪುರಾಣದ ಪ್ರವಚನ ನೀಡಿದರು. ಬಸವರಾಜ ಬಂಟನೂರ ಯಮುನೇಶ ಯಾಳಗಿ ಅವರಿಂದ ಸಂಗೀತ ಸೇವೆ ನಡೆಯಿತು.ತಬಲಾ ಸಾಥ್​ ನೀಡಿದರು. ಬಲಭೀಮ ನಾಯಕ ಮತ್ತು ಬಸವರಾಜ ಪಾರಾಪುರ ನಿರೂಪಿಸಿದರು.