ಮಮದಾಪುರದ ಮೌನ ಮಲ್ಲಿಕಾರ್ಜುನ ಮಹಾಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೀರಯ್ಯಶಾಸ್ತ್ರಿ ಚರಂತಿಮಠ ಪ್ರವಚನ ನೀಡಿದರು. ಗೌರಿಶಂಕರ ಶಿವಾಚಾರ್ಯರು, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಇತರರಿದ್ದರು. 
ರಾಜ್ಯ

ನಾಡಿಗೆ ಮಹಾತ್ಮರ ಕೊಡುಗೆ ಅಪಾರ

ವಿಜಯವಾಣಿ ಸುದ್ದಿಜಾಲ ಮಮದಾಪುರ
ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನಗಳಲ್ಲಿ ಸಮಾಜ, ನಾಡು ಹಾಗೂ ಧರ್ಮಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದು ಬಹುಮುಖ್ಯ ಎಂದು ಶಲವಡಿಯ ಪ್ರವಚನಕಾರ ವೀರಯ್ಯಶಾಸ್ತ್ರಿ ಚರಂತಿಮಠ ಹೇಳಿದರು.
ಗ್ರಾಮದ ಮೌನ ಮಲ್ಲಿಕಾರ್ಜುನ ಶಿವಯೋಗೀಶ್ವರ ಮಹಾಮಠದಲ್ಲಿ ಅಧಿಕ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಭಾನುವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಬಸ ವಣ್ಣನವರು 21, ಸ್ವಾಮಿ ವಿವೇಕಾನಂದರು 32, ಶಂಕರಾಚಾರ್ಯರು 30, ಬಸವಣ್ಣನವರು 48 ಹಾಗೂ ಬಾಲಲೀಲಾ ಮಹಾಂತ ಶಿವಯೋಗಿಗಳು 35 ವರ್ಷ ಬದುಕಿ ಅಲ್ಪಾವಧಿಯಲ್ಲಿ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದೆಲ್ಲರ ಲವಾಗಿ ಉಸಿರು ನಿಂತರೂ ನಾಡಿನಲ್ಲಿ ಮಹಾತ್ಮರ ಹೆಸರು ಹಚ್ಚ ಹಸಿರಾಗಿವೆ ಎಂದರು.
ಶ್ರೀಮಠದ ಮಂಜುನಾಥ ಶರಣರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಸ್ಪರ ಪ್ರೀತಿ&ವಿಶ್ವಾಸದ ತಳಹದಿ ಮೇಲೆ ಬದುಕು ಕಟ್ಟಿಕೊಳ್ಳುವ ಮೂಲಕ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರವಚನದ ಪೂರ್ವದಲ್ಲಿ ವಿವಿಧ ವಾದ್ಯ ಹಾಗೂ ಕುಂಭಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ವೀರಯ್ಯಶಾಸ್ತ್ರಿ ಚರಂತಿಮಠ ಅವರ ಮೆರವಣಿಗೆ ಜರುಗಿತು.
ಸದಾಶಿವ ತಲಬತ್ತಿ ಶರಣರು, ಜಿ.ಜಿ.ಮೂರ್ತೆಲೆ, ಭೀಮಶಿ ಸಿಂಗಾಡಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.