ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಶಂಕರಭೂಪಾಲ ಪಾಟೀಲ್, ನಾರಾಯಣರೆಡ್ಡಿ ಪಾಟೀಲ್, ನಾರಾಯಣರೆಡ್ಡಿ ಇಟಕಾಲ, ನವೀನಕುಮಾರ ರೆಡ್ಡಿ ಇತರರಿದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಗಂಗಾರಾವಲಪಲ್ಲಿಯಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ
ಸೇಡಂ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡವರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಅದರ ಭಾಗವೇ ಗ್ಯಾರಂಟಿ ಯೋಜನೆಯಾಗಿದೆ ಎಂದು ವೈದ್ಯಕಿಯ ಶಿಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಗಂಗಾರಾವಲಪಲ್ಲಿಯಲ್ಲಿ ಪಂಚಾಯತ್ರಾಜ್ ಇಲಾಖೆಯಿಂದ 80ಲ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಗಂಗಾರಾವಲಪಲ್ಲಿಯಿಂದ ಮೇದಕ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶ್ರೀ ಚಾಲನೆ ನೀಡಲಾಗುವುದು. ಡಾ.ಮಲ್ಲಿಕಾರ್ಜುನ ರ್ಖಗೆ ಅವರ ಪರಿಶ್ರಮದಿಂದಾಗಿ 371(ಜೆ) ವಿಶೇಷ ಸ್ಥಾನಮಾನ ಕಲ್ಯಾಣಕ್ಕೆ ದೊರೆತಿದ್ದು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಸುಮಾರು 10ಸಾವಿರಕ್ಕೂ ಅಧಿಕ ಬಡವರ ಮಕ್ಕಳು ವೈದ್ಯರಾಗಿದ್ದಾರೆ. ಇದೆಲ್ಲವು ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಭಾಗದಲ್ಲಿ ಖಾಲಿ ಇರುವ ಸುಮಾರು 30ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯ ಶಂಕರಭೂಪಾಲ ಪಾಟೀಲ್ ಮಾತನಾಡಿದರು.
ಪಂಚಾಯತ್ರಾಜ್ ಇಲಾಖೆ ಎಇಇ ವಿಶ್ವನಾಥ ಮಾವಿನಗಿಡ, ತಾಪಂ ಇಒ ಚನ್ನಪ್ಪ ರಾಯಣ್ಣವರ್, ೇತ್ರ ಶಿಣಾಧಿಕಾರಿ ಮಾರುತಿ ಹುಜರತಿ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಅನುರಾಧಾ ಪಾಟೀಲ್, ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ, ಪ್ರಮುಖರಾದ ನಾರಾಯಣರೆಡ್ಡಿ ಪಾಟೀಲ್, ನಾರಾಯಣರೆಡ್ಡಿ ಇಟಕಾಲ್, ನವೀನಕುಮಾರರೆಡ್ಡಿ, ಜನಾರ್ಧನರೆಡ್ಡಿ, ಭೀಮಶಪ್ಪ ಮೇದಕ, ಮೈಪಾಲ, ಪುಷ್ಪಾಲ್ರೆಡ್ಡಿ, ರಾಮಲಿಂಗಪ್ಪ, ಗುರುನಂಜಯ್ಯಸ್ವಾಮಿ, ಗೋಪಾಲರೆಡ್ಡಿ ಪಾಟೀಲ್ ಇದ್ದರು. ಖಾಜಾಮೈನೋದ್ದಿನ್ ಸ್ವಾಗತಿಸಿದರು. ಗುಂಡಪ್ಪ ಇಟಕಾಲ್ ನಿರೂಪಣೆ ಮಾಡಿದರು.