- ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ಮಾಹಿತಿ
- ಯಾದಗಿರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜನೆ
ಯಾದಗಿರಿ: ಸಂತಕವಿ ಕನಕದಾಸ ಮತ್ತು ತತ್ವಪದ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಜೂ.23ರಂದು ಇಲ್ಲಿನ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ತತ್ವಪದ ಹಾಡುಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಮೀನಾ ಬಾಳಿ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಆರಂಭವಾಗುವ ಈ ಸಮಾವೇಶಕ್ಕೆ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯ ಸಿದ್ದಪ್ಪ ಹೊಟ್ಟಿ ಭಾಗವಹಿಸುವರು. ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಅಧ್ಯತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಗೌಡಗಾಂವದ ಮಹಾಂತೇಶ್ವರ ಭಜನಾ ತಂಡ, ಶಹಾಪುರದ ಡೊಳ್ಳಿನ ಭಜನಾ ತಂಡ, ರಾಯಚೂರು ಜಿಲ್ಲೆಯ ಮಂರ್ಜಲಾ ಪೀರ ಭಜನಾ ತಂಡ, ವಿಜಯಪುರದ ಹುಲಿಗೆಮ್ಮ ಭಜನಾ ತಂಡ, ಖೈನೂರಿನ ಶಾಂತಲಿಂಗೇಶ್ವರ ಭಜನಾ ತಂಡ, ಗಡವಂತಿಯ ಜೈಭೀಮ ಭಜನಾ ತಂಡ, ಮಲ್ಹಾರದ ಆಂಜನೇಯ ಭಜನಾ ತಂಡ ಸಮಾವೇಶದಲ್ಲಿ ಭಾಗವಹಿಸಲಿದೆ. ಇಡೀ ದಿನ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದಿನ ಅನ್ನದಾಸೋಹ ವ್ಯವಸ್ಥೆ ಜಿಲ್ಲಾ ಕಸಾಪ ಅಧ್ಯ ಸಿದ್ದಪ್ಪ ಹೊಟ್ಟಿ ಅವರು ಮಾಡಿದ್ದಾರೆ. ಈ ಸಮಾವೇಶದಲ್ಲಿ ಶಿವಭಜನೆ, ಪಾರಿಜಾತ ಭಜನೆ, ಡೊಳ್ಳಿನ ಭಜನೆ, ಸೂಫಿ ಭಜನೆ ಸೇರಿ ಹಲವು ಭಜನಾ ಶೈಲಿಗಳನ್ನು ಸಾದರಪಡಿಸಲಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯ ಸಿದ್ದಪ್ಪ ಹೊಟ್ಟಿ, ಉಪನ್ಯಾಸಕರಾದ ಡಾ.ಎಸ್.ಎಸ್.ನಾಯಕ, ಡಾ.ಭೀಮರಾಯ ಲಿಂಗೇರಿ, ಡಾ.ಸುಭಾಷಚಂದ್ರ ಕೌಲಗಿ ಸುದ್ದಿಗೋಷ್ಠಿಯಲ್ಲಿದ್ದರು.
"
ಭಜನಾ ಪದಗಳು ಮತ್ತು ಅವುಗಳ ಹಾಡುಗಾರಿಕೆಯ ಮೂಲ ಧಾಟಿ-ಧರತಿ ಅದರ ಓ, ಓಹಟಿಗಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
— > ಡಾ.ಮೀನಾಕ್ಷಿ ಬಾಳಿ ಸದಸ್ಯ ಸಂಚಾಲಕರು