ಕಲಬುರಗಿಯಲ್ಲಿ ಸವಿತಾ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಜಯಕುಮಾರ ಪಾಟೀಲ್​, ಡಾ.ಜಗನ್ನಾಥ ತರನಳ್ಳಿ, ದೇವೇಂದ್ರಪ್ಪ ಕುರಿಹಾಳ, ಶಂಕರ ಕಾಳನೂರ ಇತರರಿದ್ದರು. 
ರಾಜ್ಯ

ಶಿಕ್ಷಣದಿಂದಲೇ ಸಮಾಜದ ಸಮಗ್ರ ಪ್ರಗತಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಲ್ಲಮಪ್ರಭು ಪಾಟೀಲ್​ ಹೇಳಿಕೆ
  • ಪ್ರತಿಭಾ ಪುರಸ್ಕಾರ, ಸವಿತಾ ಸಮಾಜದ ಸಾಧಕರಿಗೆ ಸತ್ಕಾರ
ಕಲಬುರಗಿ: ಸಮಾಜದ ಪ್ರಗತಿಗೆ ಶಿಕ್ಷಣ ಅತ್ಯಂತ ಪ್ರಮುಖ ಸಾಧನವಾಗಿದ್ದು, ಎಲ್ಲರೂ ಕಡ್ಡಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಕರೆ ನೀಡಿದರು.
ಜೇವರ್ಗಿ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜ ಸರ್ಕಾರಿ, ಅರೆಸರ್ಕಾರಿ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್​.ಡಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸರ್ಕಾರಿ ಸೇವೆಗೆ ಸೇರ್ಪಡೆಯಾದವರು, ನಿವೃತ್ತ ಸರ್ಕಾರಿ ನೌಕರರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕಾರ್ಯ ಸಂವು ನಿರಂತರವಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿ. ಯುವಕರು ಶಿಕ್ಷಣದೊಂದಿಗೆ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಜಗನ್ನಾಥ ತರನಳ್ಳಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಕುರಿಹಾಳ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಶಂಕರ ಎಸ್​. ಕಾಳನೂರ, ಆನಂದ ವಾರಿಕ, ಗಂಗಾಧರ ಎಚ್​.ಸುರಪುರ, ಡಾ.ನಾಗಪ್ಪ ಟಿ.ಗೋಗಿ, ರಾಜಶೇಖರ ಮಾನೆ, ಮಲ್ಲಣ್ಣ ಆರ್​.ಗೋಗಿ, ರಾಜೇಂದ್ರ ಬಿ.ಅಷ್ಟಗಿಕರ, ಗಣೇಶ ಪಿ.ಚಿನ್ನಾಕಾರ, ಮಹೇಶ ಉಜ್ಜೇಲಿಕರ್​, ಡಾ.ದತ್ತಾತ್ರೇಯ ಸೂರ್ಯವಂಶಿ, ಜ್ಯೋತಿ ಆಡಕಿ, ಶಶಿಕುಮಾರ ಮದ್ದೂರು ಇತರರಿದ್ದರು.
ಪ್ರಕಾಶ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಆರ್​. ಸೂರ್ಯವಂಶಿ ಪ್ರಾರ್ಥಿಸಿದರು. ಡಾ.ಶೇಷರಾವ ಚಿಕಲಿಕರ್​ ಸ್ವಾಗತಿಸಿದರು. ದೇವಿದಾಸ ಜಹೀರಾಬಾದಕರ್​ ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ ನಾಲವಾರ ನಿರೂಪಣೆ ಮಾಡಿದರು. ಗಿರಿಜಾಶಂಕರ ಗೋಗಿ ವಂದಿಸಿದರು.