ವಾಡಿಯಲ್ಲಿ ರೈಲ್ವೆ ಹಳಿ ಪಕ್ಕದ ಪಾದಚಾರಿ ಮಾರ್ಗದಲ್ಲಿನ ಕಬ್ಬಿಣದ ಸಲಕೆಗಳನ್ನು ತೆಗೆದು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು. 
ರಾಜ್ಯ

ಬಂದ್​ ಮಾಡಿದ್ದ ಪಾದಚಾರಿ ರಸ್ತೆ ಸಂಚಾರಕ್ಕೆ ಮುಕ್ತ

ಪ್ರಮುಖ ಮುಖ್ಯಾಂಶಗಳು

  • ವಾಡಿಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ರೈಲ್ವೆ ಇಲಾಖೆ
ವಾಡಿ: ಪಟ್ಟಣದ ರೈಲು ನಿಲ್ದಾಣ ಹಾಗೂ ಹಳಿಗಳ ಆಚೆ ಇರುವ ಹಲವು ಬಡಾವಣೆಗೆ ಸಂಪರ್ಕಿಸುವ ಏಕೈಕ ರೈಲ್ವೆ ಹಳಿ ಮೇಲಿನ ಪಾದಚಾರಿ ರಸ್ತೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಬುಧವಾರ ಸಂಚಾರಕ್ಕೆ ಮುಕ್ತಗೊಳಿಸಿದರು.
ಮಂಗಳವಾರ ಏಕಾಏಕಿ ಪಾದಚಾರಿ ರಸ್ತೆಯನ್ನು ರೈಲ್ವೆ ಅಧಿಕಾರಿಗಳು ಕಬ್ಬಿಣದ ಸಲಕೆಗಳಿಂದ ಮುಚ್ಚಿದ್ದರು. ಇದರಿಂದ ರೈಲ್ವೆ ಹಳಿಯ ಆಚೆ ಇರುವ ಸುಮಾರು 20 ಸಾವಿರ ಜನರಿಗೆ ತೀವ್ರ ತೊಂದರೆಯಾಗಿತ್ತು. ಸ್ಥಳಿಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ನೇತೃತ್ವದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ, ಕರವೇ ಸಂಟನೆಗಳೊಂದಿಗೆ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ರ್ನಿಲಕ್ಷ ವಹಿಸಿದರೆ ಜೂ.8ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕಬ್ಬಿಣದ ಸಲಕೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಿಜೆಪಿ ಸ್ಥಳಿಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರೈಲ್ವೆ ಇಲಾಖೆ ಪಾದಚಾರಿ ರಸ್ತೆ ತೆರವುಗೊಳಿಸಿದ್ದಕ್ಕೆ ಧನ್ಯವಾದಗಳು. ರಸ್ತೆ ಬಂದ್​ ಮಾಡಿದ್ದರಿಂದ ಹಳಿ ಆಚೆಯ ಹನುಮಾನ, ಇಂದಿರಾ ಹಾಗೂ ರೈಲ್ವೆ ಕಾಲನಿ ಸೇರಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಅಧಿಕಾರಿಗಳು ಮನವಿ ಮಾಡಿದ್ದು, ಸ್ಪಂದಿಸಿರುವುದು ಖುಷಿ ತಂದಿದೆ.
ದೌಲತರಾವ ಚಿತ್ತಾಪುರಕರ್​, ಜಗದೀಶ ಮುಕ್ಕನಾಳ, ವಿಶ್ವಾರಾಧ್ಯ ತಳವಾರ, ಸುರೇಶ ನಾಯಕ ಇತರರಿದ್ದರು.