ಬ್ರಹ್ಮಚೈತನ್ಯರ ರಥೋತ್ಸವ ಅದ್ದೂರಿ Brahma Chaitanya
- ದೇವರಿಗೆ ವಿಶೇಷ ಪೂಜೆ ಸಲ್ಲಿಕೆ
ಚಿಂತಾಮಣಿ: ಒಂದು ವಾರದಿಂದ ನಗರದ ಎನ್.ಆರ್.ಬಡಾವಣೆಯಲ್ಲಿನ ಶ್ರೀಬ್ರಹ್ಮಚೈತನ್ಯ ಮಹಾರಾಜರ ಆರಾಧನೋತ್ಸಕ್ಕೆ ಕೊನೆಯ ದಿನವಾದ ಸೋಮವಾರ ರಥೋತ್ಸವವು ವೈಭವದ ತೆರೆ ಕಂಡಿತು. Brahma Chaitanya
ಮಂದಿರದ ಪ್ರಧಾನ ಅರ್ಚಕ ರುನಾಥ್ ದೇವಸ್ಥಾನದ ಮುಂಭಾಗ ಗಣೇಶನಿಗೆ ಪ್ರಥಮ ಪೂಜೆ, ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ಮಂದಿರದ ಅಧ್ಯಕ್ಷ ಜಿ.ಎಚ್.ವೆಂಕಟೇಶಮೂರ್ತಿ ರಥಕ್ಕೆ ಚಾಲನೆ ನೀಡಿದರು.
ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾರುತಿ, ಬ್ರಹ್ಮಚೈತನ್ಯ ಗುರುಗಳ ಸಮೇತ ಶ್ರೀರಾಮ, ಲಕ್ಷ$್ಮಣ, ಸೀತಾಮಾತೆಯ ವಿಗ್ರಹಗಳನ್ನು ಶೇಷವಾಹನದಲ್ಲಿ ಹೂಗಳಿಂದ ಅಲಂಕರಿಸಿದ ರಥದಲ್ಲಿ ಕೂರಿಸಲಾಯಿತು.ರಥೋತ್ಸವದಲ್ಲಿ ವೇದೂಷ, ಶ್ರೀರಾಮನಾಮಸ್ಮರಣೆ, ಭಜನಾ ನೃತ್ಯ, ಕೋಲಾಟ, ಸಾಮೂಹಿಕ ಸಂಕೀರ್ತನೆ, ಮಂಗಳವಾದ್ಯಗಳು ವಿಶೇಷವಾಗಿತ್ತು.
ಬೆಳಗ್ಗೆ ಶ್ರೀಬ್ರಹ್ಮಚೈತನ್ಯರ ಪಾದುಕೆಗಳಿಗೆ ಭಕ್ತರಿಂದ ರಾಭಿಷೇಕ ಮಾಡಲಾಯಿತು.
ಶ್ರೀರಾಮಚಂದ್ರಪ್ರಭುವಿಗೆ ಮಂದಿರದ ಪ್ರಕಾರದಲ್ಲಿ ಶ್ರೀರಾಮ ತಾರಕ ಮಂತ್ರ ಜಪಿಸುತ್ತಾ ಸಾಮೂಹಿಕ ಪ್ರದಣೆ ನಮಸ್ಕಾರವನ್ನು ನೂರಾರು ಭಕ್ತರು ನೆರವೇರಿಸಿದರು. ನಂತರ ಗರ್ಭಗುಡಿಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.ರುದ್ರಾಭಿಷೇಕ, ಅಷ್ಟಾವಧಾನಸೇವೆ, ಸಾಮೂಹಿಕ ಭಜನೆ, ಮಹಾಮಂಗಳಾರತಿ ಸಮರ್ಪಿಸಲಾಯಿತು.
ಟ್ರಸ್ಟ್ನ ಅಧ್ಯಕ್ಷ ಜಿ.ಎಚ್.ವೆಂಕಟೇಶಮೂರ್ತಿ, ಉಪಾಧ್ಯಕ್ಷ ಜಿ.ಎಚ್.ರುನಾಥ್, ಬಿ.ಸಿ.ಪ್ರಸಾದ್, ರಾಜಾರಾಂ, ಗುರುನಾಥ್, ಜಿ.ಜಯರಾಂ, ರಾಧೇಶ್ಯಾಂ ಇದ್ದರು.