ದೆಹಲಿಯಲ್ಲಿ ನೀಟ್ ಪರೀಕ್ಷೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬೆಟ್ಟಯ್ಯ ಕೋಟೆ, ಚಾ.ನಂಜುಂಡಮೂರ್ತಿ, ಜೀವಿಕ ಬಸವರಾಜ್, ಬಿ.ಉಮೇಶ್ ನೂರಲಕುಪ್ಪೆ, ಬೆಟ್ಟಸ್ವಾಮಿ ಇತರರು ಇದ್ದರು. 
ರಾಜ್ಯ

ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲಿ

ಎಚ್.ಡಿ.ಕೋಟೆ: ನೀಟ್ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವು ಎಂದು ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ತಿಳಿಸಿದರು.

ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ತಾಲೂಕು ಪ್ರಗತಿಪರ ಸಂಘಟನೆಗಳ ವತಿಯಿಂದ ನೀಟ್ ಪರೀಕ್ಷೆಯಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಶಿಕ್ಷಣ ಸಚಿವರಿಂದ ರಾಜೀನಾಮೆ ಸ್ವೀಕರಿಸಿದೆ. ಆದರೆ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು. ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳು ಈಡೇರಿಲ್ಲ. ಅಲ್ಲದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ವಿನಾಕಾರಣ ತೊಂದರೆ ಕೊಡುವುದು, ಕೇಸ್ ಹಾಕುವುದು ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದರು.

ಸಂಶೋಧಕರ ಸಂಘದ ಅಧ್ಯಕ್ಷ ಡಾ.ಎಸ್.ಮರಿದೇವಯ್ಯ ಮಾತನಾಡಿ, ದೇಶದಾದ್ಯಂತ ಯುವಕರು ಎದ್ದುನಿಂತರೆ ಏನೆಲ್ಲಾ ಬದಲಾವಣೆ ತರಬಹುದು ಎಂದು ಈ ಹೋರಾಟದಿಂದ ಅರ್ಥವಾಗಿದೆ. ಅದ್ದರಿಂದ ಆಳುವ ಸರ್ಕಾರಗಳು ವಿದ್ಯಾರ್ಥಿಗಳ ಪರವಾದ ಆಡಳಿತ ನಡೆಸಬೇಕು. ಇಲ್ಲದಿದ್ದರೆ ಯುವ ಸಮೂಹ ದಂಗೆ ಏಳಲಿದೆ ಎಂದು ಎಚ್ಚರಿಸಿದರು.

ಪ್ರಗತಿಪರ ಮುಖಂಡ ಅಕ್ಬರ್ ಪಾಷ, ಸರಗೂರು ಶಿವಣ್ಣ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.
ಚಾ.ನಂಜುಂಡಮೂರ್ತಿ, ಜೀವಿಕ ಬಸವರಾಜ್, ಬಿ.ಉಮೇಶ್ ನೂರಲಕುಪ್ಪೆ, ಬೆಟ್ಟಸ್ವಾಮಿ ಕುರ್ಣೇಗಾಲ, ಬುದ್ಧ ಪ್ರಕಾಶ್, ಆಟೋ ಕುಮಾರ್, ಜಸ್ಸಿಲಾ, ಕಾಳಪ್ಪಾಜಿ, ಪ್ರೇಮ್ ಕುಮಾರ್, ಸೋಮಣ್ಣ (ಚನ್ಬ) ಕೋಟೆ, ಸಮೀರ್ ಕೋಟೆ, ಮೂರ್ತಿ, ವಕೀಲ ಜವರಯ್ಯ, ಕೆಂಪಶೆಟ್ಟಿ, ಸರಗೂರು ಶಿವಣ್ಣ, ಚೆನ್ನಿಪುರ ಮಲ್ಲೇಶ್, ಸದಾಶಿವ, ಅನಿಲ್ ಸಿಂಗ್, ಪುಟ್ಟರಾಜ್ ಹೆಗ್ಗನೂರು, ಮಹೇಶ್ ಮಲಾರ, ಸಿದ್ದರಾಜು ಹೊಮ್ಮರಗಳ್ಳಿ, ರಾಚಪ್ಪ, ಶಿವರಾಜ್, ಮಾನವೀಕರ್, ಆನಂದ್, ಮೂರ್ತಿ, ರಾಜು, ನಾಗರಾಜ್, ಅನಿಲ್ ಕುಮಾರ್ ಇತರರು ಇದ್ದರು.