ಸಂಸದ ಡಾ. ಸಿ.ಎನ್. ಮಂಜುನಾಥ್  
ರಾಜ್ಯ

ವೈದ್ಯರಿಗೆ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಪುಸ್ತಕ ಮಹಾನ್ ಗ್ರಂಥವಾಗಲಿದೆ

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ಹಾರೈಕೆ ಮಾಡುವ ನರ್ಸ್‌ಗಳಿಗೆ ‘ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ’ ಪುಸ್ತಕವು ಮಹಾನ್ ಗ್ರಂಥವಾಗಲಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.
ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಆತ್ಮ ಪ್ರಸನ್ನ ಸಂಪಾದಿತ ‘ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತದಲ್ಲಿ ಇಂದಿಗೂ ‘ಪ್ಯಾಲಿಟಿವ್ ಕೇರ್’ ಸರಿಯಾದ ರೀತಿಯಲ್ಲಿ ವಿನ್ಯಾಸವಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ಅಪರೂಪದ ಕೃತಿ ಬಿಡುಗಡೆಯಾಗಿರುವುದು ಸಂತಸವಾಗಿದೆ. ಕೆಲವು ಬಗೆಯ ಕ್ಯಾನ್ಸರ್‌ಗಳು ಸಂಪೂರ್ಣವಾಗಿ ವಾಸಿ ಆಗುವುದಿಲ್ಲ. ಅಂತಹ ರೋಗಿಗಳ ಬದುಕುವ ಅವಧಿಯನ್ನು ಹೆಚ್ಚಿಸಬೇಕು. ಈ ಪುಸ್ತಕದಲ್ಲಿ ನೂರಾರು ಅಧ್ಯಯನಗಳಿವೆ. ಪುಸ್ತಕ ಓದಿದರೆ ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ಪುಸ್ತಕದಲ್ಲಿ ಭಾರತದ ಶ್ರೇಷ್ಠ ವೈದ್ಯರುಗಳು ವಿವರಿಸಿರುವ ಅನೇಕ ಅಂಶಗಳಿವೆ ಎಂದು ಶಂಕರ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ.ಆತ್ಮ ಪ್ರಸನ್ನ ಅವರ ಪತ್ನಿ ಡಾ.ಮಿತಾ ಪ್ರಸನ್ನ, ಈ ಪುಸ್ತಕದ ಕುರಿತು ಬೆಳಕು ಚೆಲ್ಲಿದರು.