ಆಲಮೇಲ ಪಟ್ಟಣದಲ್ಲಿ ಭಾನುವಾರ 2005-06ನೇ ಸಾಲಿನ ವಿದ್ಯಾರ್ಥಿಗಳಿಂದ ಏರ್ಪಡಿಸಿದ ಗುರು ವಂದನಾ ಕಾರ್ಯಕ್ರಮದ ಸವಿ ನೆನಪಿಗಾಗಿ ಎ.ಕೆ.ನಂದಿ ಹೈಸ್ಕೂಲ್ ಮೈದಾನದಲ್ಲಿ ಗುರುಗಳು ಸಸಿ ನೆಟ್ಟು ನೀರು ಹಾಕಿದರು. ಜಿ.ಜಿ.ಕಿಣಗಿ, ಸಿ.ಕೆ. ಸಿಂಪಿ, ಎಸ್.ಎಸ್.ಬಿರಾದಾರ, ಆರ್.ಎನ್. ಮಸಳಿ, ಎನ್.ಎಸ್. ದೇವರಮನಿ ಮತ್ತಿತರರಿದ್ದರು.
- ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಎಸ್. ದೇವರಮನಿ ಅಭಿಮತ
- ವಿದ್ಯಾರ್ಥಿಗಳಿಂದ ಸನ್ಮಾನ
ಆಲಮೇಲ: ವಿದ್ಯೆಗೆ ಬದುಕು ನೀಡಿದ ಗುರುಗಳನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸುವ ಮೂಲಕ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದೊಂದಿಗೆ ಗುರು ಶಿಷ್ಯರ ಬಾಂಧವ್ಯಗಳನ್ನು ಗಟ್ಟಿಗೊಳಿಸಿ, ಹಳೆಯ ನೆನಪು ಮೆಲಕು ಹಾಕುವ ವೇದಿಕೆ ಏರ್ಪಡಿಸಿದ ವಿದ್ಯಾರ್ಥಿಗಳ ಕಾರ್ಯ ಮೆಚ್ಚುವಂತಹದ್ದು ಎಂದು ಎ.ಕೆ.ನಂದಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಎಸ್.ದೇವರಮನಿ ಹೇಳಿದರು.
ಪಟ್ಟಣದ ಐ.ಕೆ.ಂಕ್ಷನ್ ಹಾಲ್‌ನಲ್ಲಿ ಭಾನುವಾರ 2005-06ನೇ ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಂದಗಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಹಳೆಮನಿ ಮಾತನಾಡಿ, ಒಂದೇ ಶಾಲೆಯಲ್ಲಿ ಓದಿದ ಹಳೆಯ ಸಹಪಾಠಿಗಳು ವರ್ಷಗಳ ನಂತರ ಒಂದೆಡೆ ಸೇರಿ, ತಮ್ಮ ಬಾಲ್ಯದ ದಿನಗಳನ್ನು ಹಂಚಿಕೊಳ್ಳುವುದರ ಜತೆಗೆ ವಿದ್ಯೆ ಎಂಬ ಸಂಸ್ಕಾರ ನೀಡಿ ಭವಿಷ್ಯ ರೂಪಿಸಿದ ಗುರುಗಳಿಗೆ ಗೌರವ ಪೂರ್ವಕ ಸತ್ಕಾರ ಮಾಡಿರುವುದು ಬಹಳ ಖುಷಿ ತಂದಿದೆ ಎಂದರು.
ಶಿಕ್ಷಕರಾದ ಜಿ.ಜಿ.ಕಿಣಗಿ, ಸಿ.ಕೆ. ಸಿಂಪಿ, ಎಸ್.ಎಸ್.ಬಿರಾದಾರ, ಆರ್.ಎನ್. ಮಸಳಿ, ಎನ್.ಎಸ್. ದೇವರಮನಿ, ಎಂ.ಎಸ್.ಬಬಲೇಶ್ವರ, ಎ.ಜಿ. ವಾಲಿ, ಎಸ್.ಎಸ್. ಮಹೀಂದ್ರಕರ, ಶರಣಗೌಡ.ಬಿ.ಪಾಟೀಲ, ಸಿ.ಎಂ. ಬಂಡಗರ, ವಿ. ಎಸ್. ತೇರದಾಳ, ಕೆ.ವಿ.ಹಾಬಾಳ, ಎಂ.ಆರ್.ಮಹಾ ಜನ, ಎನ್.ಜಿ. ಮೊಕಾಶಿ, ಎಂ.ಜಿ.ಹಿರೇಮಠ, ಎಸ್.ಎಸ್. ಹಳೆಮನಿ, ಸಿ.ಎಂ.ಕೊಟ್ಟಲಗಿ, ಶ್ರೀಶೈಲ ಮಠಪತಿ ಅವರನ್ನು ಸನ್ಮಾಸಲಾಯಿತು.
ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗುರುಗಳನ್ನು ಪಟ್ಟಣದ ಮೇನ್ ಬಜಾರ ದೇವಿಗುಡಿಯಿಂದ ಗೊಂಬೆಗಳ ಕುಣಿತ ಮೆರವಣೆಗೆಯ ಮೂಲಕ ಸಿಂದಗಿ ರಸ್ತೆಯ ಐ.ಕೆ.ರಾಯಲ್ ಂಕ್ಷನ್ ಹಾಲ್‌ದವರೆಗೆ ಕರೆ ತರಲಾಯಿತು.
ಶ್ರೀಶೈಲಯ್ಯ ಅಳ್ಳೋಳ್ಳಿಮಠ, ಅರ್ಜುಣಗಿ ಹಿರೇಮಠದ ಷ.ಬ್ರ.ಸಂಗನಬಸವ ಶಿವಾಚಾರ್ಯರು, ಪಿಂಟು
ನಾಯ್ಕೋಡಿ, ವಿವೇಕ ಸದ್ಲಾಪೂರ, ಶಿವು ತಳವಾರ, ಅಮತ ಕೊಟ್ಟಲಗಿ, ವಿನಾಯಕ ಕಲಶಟ್ಟಿ, ವಿಶ್ವನಾಥ
ಹಿರೇಮಠ, ಜೈಭೀಮ ಮಾಡ್ಯಾಳ ಮತ್ತಿತರರಿದ್ದರು.