ಬೆಳಗಾವಿಗೂ ತಲುಪಿದ ಬೇತಮಂಗಲ ಕಡತ 
ರಾಜ್ಯ

ಬೆಳಗಾವಿಗೂ ತಲುಪಿದ ಬೇತಮಂಗಲ ಕಡತ

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಮೇಲ್ದರ್ಜೆಗೇರಿಸಲು ಶಾಸಕಿ ರೂಪಕಲಾ ಸತತ ಪ್ರಯತ್ನ
  • ಡಿಸಿಯಿಂದ ಸರ್ಕಾರಕ್ಕೆ ಶಿಾರಸು
ಬೇತಮಂಗಲ: ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಜಿಲ್ಲೆಯ ಅತಿ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದ ಬೇತಮಂಗಲ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸುವ ಕುರಿತು ಕೆಜಿಎ್​ ಶಾಸಕಿ ರೂಪಕಲಾ ಅವರು ಸತತ ಪ್ರಯತ್ನ ನಡೆಸಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮತ್ತ ಘೋಷಣೆ ಆಗುವುದೇ ಎನ್ನುವ ಕೂತೂಹಲ ಹುಟ್ಟಿಸಿದೆ. Betamangala
ಫೆಬ್ರವರಿಯಲ್ಲಿ ಪಂಚಾಯಿತಿ ಅಧಿಕಾರ ಮುಕ್ತಾಯವಾಗಲಿದ್ದು, ಮಾರ್ಚ್​ ಅಥವಾ ಏಪ್ರಿಲ್​ನಲ್ಲಿ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ ಬೇತಮಂಗಲ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವ ದೃಢ ನಿರ್ಧಾರ ತೆಗೆದುಕೊಂಡಿರುವ ಶಾಸಕಿ ಕಳೆದ ಆರು ತಿಂಗಳಿನಿಂದ ಸಂಬಂದಪಟ್ಟ ಎಲ್ಲ ದಾಖಲೆಗಳನ್ನು ಕ್ರೋಡಿಕರಿಸಿದ್ದಾರೆ ಎನ್ನಲಾಗಿದೆ.
ಪಂಚಾಯಿತಿಯಿಂದ ಜಿಲ್ಲಾಧಿಕಾರಿವರೆಗೆ: ಕಳೆದ ಒಂದು ವರ್ಷದಿಂದ ಬೇಕಾದ ಎಲ್ಲ ಸಿದ್ಧತೆಗಳಿಗೆ ಸತತ ಪ್ರಯತ್ನ ನಡೆದಿತ್ತು. ಗ್ರಾಪಂನಲ್ಲಿ ಸರ್ವಾನುಮತದ ರ್ನಿಣಯ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಇದ್ದ ಎಲ್ಲ ಅಡ್ಡಿ ಆತಂಕಗಳ ನಿವಾರಣೆ ಮಾಡಿ ಮೇಲ್ದರ್ಜೆಗೆ ಬೇಕಾದ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ದಾಖಲೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಸರ್ಕಾರಕ್ಕೆ ಶಿಾರಸು ಮಾಡಲು ಬೇಕಾದ ಅಂಕಿ&ಅಂಶಗಳು ಮತ್ತು ದಾಖಲೆಗಳನ್ನು ಪಡೆದು ಬೇತಮಂಗಲ ಗ್ರಾಪಂ ಅನ್ನು ಪಪಂ ಆಗಿ ಮಾಡಲು ಎಲ್ಲ ಅರ್ಹತೆ ಇದ್ದು, ಇದನ್ನು ಪರಿಗಣಿಸಬಹುದು ಎಂದು ಸರ್ಕಾರಕ್ಕೆ ಶಿಾರಸು ಮಾಡಿದ್ದಾರೆ ಎನ್ನಲಾಗಿದೆ.
ಪೌರಾಡಳಿತ ಕಮೀಷನರ್​ ಕಚೇರಿಗೆ ಫೈಲ್​: ಅಗತ್ಯ ಕಡತಗಳು ವೇಗವಾಗಿ ಬೇತಮಂಗಲದಿಂದ ಕೆಜಿಎಫ್​, ಕೋಲಾರ ಮತ್ತು ಬೆಂಗಳೂರು ಸೇರಿದ್ದು ಸಂಬಂಧಪಟ್ಟ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಕೇಂದ್ರ ಕಚೇರಿಗೆ ಸೇರಿದೆ. ಜತೆಗೆ ಶಾಸಕಿ ಈಗ ಬೆಳಗಾವಿಗೂ ಕಡತ ತೆಗೆದುಕೊಂಡು ಹೋಗಿದ್ದು, ಸಾಧ್ಯವಾದರೆ ಅಲ್ಲಿಯೇ ಮಂತ್ರಿಗಳನ್ನು ಭೇಟಿ ಮಾಡಿ ಎಲ್ಲವನ್ನೂ ತಿಳಿಸಿ ಮುಖ್ಯಮಂತ್ರಿಗಳ ಮೂಲಕ ಘೋಷಣೆ ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಒಂದು ವೇಳೆ ಅಧಿವೇಶನ ಸಂದರ್ಭದಲ್ಲಿ ಘೋಷಣೆ ಮಾಡಲು ಸಾಧ್ಯವಾಗದಿದ್ದರೆ, ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಿ ಘೋಷಿಸುವಂತೆ ಕೋರಲು ರೂಪಕಲಾ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾನದಂಡವೇನು?: ಬೇತಮಂಗಲ ಪಟ್ಟಣವು 2011ರ ಗಣತಿಯಂತೆ ಒಟ್ಟು 13 ಸಾವಿರ ಜನಸಂಖ್ಯೆ ಇತ್ತು. ಇದೀಗ 20 ಸಾವಿರ ಮೇಲ್ಪಟ್ಟಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಂದಾಜು ಜನಸಂಖ್ಯೆ ಒಪ್ಪಲು ದಾಖಲೆಗಳು ಇಲ್ಲ ಎಂದು ವಾಪಸ್​ ಕಳಿಸಿತ್ತು. ನಂತರ ಕಮ್ಮಸಂದ್ರ ಪಂಚಾಯಿತಿಯ ನಾಗಶೆಟ್ಟಿಹಳ್ಳಿ ಮತ್ತು ಬ್ಯಾಟರಾಯನಹಳ್ಳಿಗಳನ್ನು ಸೇರ್ಪಡೆ ಮಾಡಿ ಶಿಫಾರಸಿಗೆ ಕಳಿಸಲಾಗಿತ್ತು. ಇದಕ್ಕೆ ಕಮ್ಮಸಂದ್ರ ಪಂಚಾಯಿತಿಯಿಂದಲೂ ರ್ನಿಣಯದ ಅನುಮತಿ ಪಡೆಯಲಾಗಿದೆ. ಇದರಿಂದಾಗಿ ಒಟ್ಟು ಜನಸಂಖ್ಯೆ 17,500 ಸಾವಿರ ಎಂದು ಒಟ್ಟುಗೂಡಿಸಿ ಕಳಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಪ್ಪಿಗೆ ಸಿಕ್ಕಿದೆ.
ಒತ್ತಡಕ್ಕೆ ಮಣಿಯದ ಶಾಸಕರು: ಬೇತಮಂಗಲ ಪಪಂ ಆಗಲಿದೆ ಎಂಬ ಸುಳಿವು ಪಡೆದ ಪಕ್ಕದ ಹಳ್ಳಿಗಳ ಪ್ರಭಾವಿ ಮುಖಂಡರು ತಮ್ಮ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಸಾಕಷ್ಟು ಒತ್ತಡ ಹಾಕಿದ್ದರು. ಆದರೆ ಪ್ರಭಾವಕ್ಕೆ ಒಳಗಾದರೆ ಇನ್ನಿಲ್ಲದ ಸಮಸ್ಯೆ ಆಗಬಹುದು ಎನ್ನುವುದನ್ನು ಗ್ರಹಿಸಿದ ಶಾಸಕಿ ಕಮ್ಮಸಂದ್ರ ಪಂಚಾಯಿತಿಯ ಎರಡು ಗ್ರಾಮಗಳನ್ನು ಮಾತ್ರ ಸೇರಿಸಿ ಶಿಫಾರಸಿಗೆ ಕಳಿಸಿದ್ದಾರೆ ಎನ್ನಲಾಗಿದೆ.