ವಿಶ್ವದಲ್ಲೇ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆ judicial system
- ಜೆಎಂಎಫ್ಸಿ ಕಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಹರೀಶ್ ಹೇಳಿಕೆ
ಮುಳಬಾಗಿಲು: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಬಲಿಷ್ಠ ಸಂವಿಧಾನ ನೀಡಲಾಗಿದ್ದು, ಪ್ರತಿಯೊಬ್ಬರ ಹಕ್ಕು ರಕ್ಷಣೆಗಾಗಿ ಮಾನವ ಹಕ್ಕುಗಳನ್ನು ಜಾರಿಗೊಳಿಸಲಾಗಿದೆ. ವಿಶ್ವದಲ್ಲಿ ಮಾನವ ಹಕ್ಕುಗಳು, ಕಾಯ್ದೆಗಳು ಜಾರಿಯಲ್ಲಿದ್ದು, ಇದರ ಬಗ್ಗೆ ಎಲ್ಲರೂ ಕನಿಷ್ಠ ತಿಳಿವಳಿಕೆ ಹೊಂದಿರಬೇಕು ಎಂದು ಜೆಎಂಎಫ್ಸಿ ಕಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಹರೀಶ್ ತಿಳಿಸಿದರು. judicial system
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತದ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲಿ ಬಲಿಷ್ಠವಾಗಿದೆ. ಸತ್ಯಮೇವ ಜಯತೆ ಘೋಷ ವ್ಯಾಕ್ಯದಂತೆ ಸರ್ವರಿಗೂ ಸಮರ್ಪಕ ನ್ಯಾಯ ನೀಡುತ್ತಿದೆ ಎಂದು ತಿಳಿಸಿದರು.
ಮಾನವ ಹಕ್ಕು ಉಲ್ಲಂಘನೆಯಾಗಿರುವ ಬಗ್ಗೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ. ಅಲ್ಲಿ ನ್ಯಾಯ ದೊರೆಯದಿದ್ದಲ್ಲಿ ಹೈಕೋರ್ಟ್ನಲ್ಲಿ ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪಡೆಯಬಹುದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉಚಿತ ಕಾನೂನು ಸೇವೆಗಳ ಸಮಿತಿಯಿಂದ ಅರಿವು ಮೂಡಿಸಲಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಥಮಿಕ ಕಾನೂನು ಜ್ಞಾನ ಪಡೆಯಬಹುದು ಎಂದರು.
ಹಾಸ್ಟೆಲ್ ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು.