ಪ್ರಥಮ ಏಕಾದಶಿ ಪ್ರಯುಕ್ತ ವಿಜಯಪುರದ ಶ್ರೀ ಕ್ಷೇತ್ರ ಹಾರ್ಡಿಪುರದ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್ ಗೌಡ, ದೇವಾಲಯದ ಪ್ರಧಾನ ಅರ್ಚಕ ನೀಕಿಲ್ ಶಾಸ್ತ್ರೀ, ಶ್ರೀನಿವಾಸಪ್ಪ, ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು, ಬಾಬಣ್ಣ ಭಕ್ತರು ಇದ್ದರು.
ವಿಜಯಪುರ : ದೇವರು ಇದ್ದಾನೆ ಎಂಬುದು ಮನುಷ್ಯನ ನಂಬಿಕೆ. ಆ ನಂಬಿಕೆಯೇ ನಮ್ಮನ್ನು ಸರಿದಾರಿಯಲ್ಲಿ ನಡೆಸುತ್ತದೆ. ತಂತ್ರಜ್ಞಾನದಿಂದ ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ದೈವದ ಮುಂದೆ ಪ್ರತಿಯೊಬ್ಬರು ತಲೆ ಬಾಗಬೇಕಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್ ಗೌಡ ಹೇಳಿದರು.
ಪ್ರಥಮ ಏಕಾದಶಿ ಪ್ರಯುಕ್ತ ಹಾರ್ಡಿಪುರ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಂಸ್ಕಾರ, ಆಚಾರ&ವಿಚಾರ ಬೆಳೆಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಯುವಕರು ಭಾಗವಹಿಸಬೇಕು. ಧ್ಯಾನ, ಪೂಜೆಯಿಂದ ನಮ್ಮಲ್ಲಿ ಅಡಗಿರುವ ದ್ವೇಷ, ಅಸೂಯೆ ಕಡಿಮೆಯಾಗುತ್ತದೆ. ಸಮಾಜದ ಬಗ್ಗೆ ಗೌರವ, ಪ್ರೀತಿ ಬೆಳೆಯುತ್ತದೆ. ಧ್ಯಾನ, ಮನಸ್ಸಿಗೆ ಮುದ ನೀಡುವುದರ ಜತೆಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ದೇವಾಲಯ ಧರ್ಮದರ್ಶಿ ಜಯರಾಮ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಧರ್ಮದ ಬಗ್ಗೆ ಶ್ರದ್ಧೆ ಭಕ್ತಿ ಬೆಳವಣಿಗೆಯಾದಲ್ಲಿ ಮಾತ್ರ ಸಮಾಜದ ಅಶಾಂತಿ ದೂರ ಮಾಡಬಹುದು. ಪ್ರಸ್ತುತ ಸಮಾಜದಲ್ಲಿ ಅಶಾಂತಿ ವಾತಾವರಣ ಹೆಚ್ಚಾಗಿ ಭಕ್ತಿ ಭಾವ ದೂರವಾಗುತ್ತಿದೆ ಎಂದು ಹೇಳಿದರು.