ರೈತರನ್ನು ಜಾಗೃತಗೊಳಿಸುವುದೇ ಸಂದ ಉದ್ದೇಶ farmers
ಮುಳಬಾಗಿಲು: ರೈತರನ್ನು ಜಾಗೃತಗೊಳಿಸಿ, ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಭಾರತೀಯ ಕಿಸಾನ್ ಸಂ ಮಾಡುತ್ತಿದೆ ಎಂದು ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಮಂಡಿಕಲ್ ಎಂ.ಎಸ್. ಮಂಜುನಾಥ್ ಹೇಳಿದರು.farmers
ತಾಲೂಕಿನ ಸಂಗಸಂದ್ರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಾರತೀಯ ಕಿಸಾನ್ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತೀಯ ಕಿಸಾನ್ ಸಂಘ ಒಂದು ಸೈದ್ಧಾಂತಿಕ ರಾಷ್ಟ್ರೀಯ ಸಂಕಲ್ಪದೊಂದಿಗೆ ರೈತರಿಗಾಗಿ ಕೆಲಸ ಮಾಡುತ್ತಿದೆ. ಜತೆಗೆ ರೈತರ ಸಮಸ್ಯೆ ಪರಿಹರಿಸಲು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕೆಂಬ ಕಾರ್ಯ ಚಟುವಟಿಕೆ ಮಹತ್ವದಿಂದ ಕೂಡಿದೆ. ರೈತರು ಸ್ವ ಪ್ರೇರಣೆಯಿಂದ ಸಂಘಟಿತರಾಗಿ ಭ್ರಷ್ಟಾಚಾರ ರಹಿತ ಆಡಳಿತ ಸ್ಥಾಪನೆಗೆ ಕೈಜೋಡಿಸಬೇಕು, ಆಗ ರೈತಾಪಿ ವರ್ಗಕ್ಕೆ ನ್ಯಾಯ ಸಿಗಲಿದೆ ಎಂದರು.
ಮಹಾಭಾರತದಲ್ಲಿ ಬಾಲರಾಮ ವಿಶ್ವಕ್ಕೆ ಕೃಷಿಯ ಪರಂಪರೆ ಪರಿಚಯಿಸಿ, ಕೃಷಿಯ ಮಹತ್ವ ಸಾರಿದನು. ಹೆಗಲ ಮೇಲೆ ನೇಗಿಲು ಹೊತ್ತು ರೈತರನ್ನು ಪ್ರತಿನಿಧಿಸಿದ ರೈತರ ಆರಾಧ್ಯರಾಗಿದ್ದಾರೆ. ಭಗವಾನ್ ಬಲರಾಮ ಜಯಂತಿಯನ್ನು ಅಂತಾರಾಷ್ಟ್ರೀಯ ರೈತರ ದಿನವಾಗಿ ಸೆಪ್ಟಂಬರ್ನಲ್ಲಿ ಘೋಷಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಸಂಘದಿಂದ ಒತ್ತಡ ತಂದು ನಮ್ಮ ದೇಶೀಯ ಸಂಸತಿ ಪರಂಪರೆ ಉಳಿಸಲು ಮುಂದಾಗಬೇಕೆಂದು ಹೇಳಿದರು.
ಕಿಸಾನ್ ಸಂಘದ ಪ್ರಾಂತ ಮಹಿಳಾ ಪ್ರಮುಖ್ ಚಳ್ಳಕೆರೆ ಆರ್.ಅಮೃತಾ ಮಾತನಾಡಿ, ಸರ್ಕಾರಗಳು ರೈತರ ಮನವಿಗೆ ಕಿವಿಗೊಡದೇ ಹೋದರೆ ಹೋರಾಟ, ಧರಣಿ ನಡೆಸುವ ಮೂಲಕ ರೈತರೆ ನಾಯಕರಾಗಿ ಮುನ್ನುಗ್ಗಬೇಕಾಗುತ್ತದೆ. ಇದರಿಂದ ರೈತರಲ್ಲಿ ನಾಯಕತ್ವಗುಣ ಹೆಚ್ಚಿಸುವುದು ಸಂದ ಉದ್ದೇಶ ಎಂದರು.
ತಾಲೂಕು ಅಧ್ಯಕ್ಷ ಉಗನಿ ಆರ್.ನಾರಾಯಣಗೌಡ, ತಾಲೂಕು ಕಾರ್ಯದರ್ಶಿ ಪಿ.ಗಂಗಾಪುರ ಮುನಿ ರಾಮಯ್ಯ, ಜಿಲ್ಲಾ ಮಹಿಳಾ ಪ್ರಮುಖ್ ಭೀಮಾಪುರ ಬಿ.ಎಸ್.ಶಶಿಕಲಾ, ತಾಲೂಕು ಮಹಿಳಾ ಪ್ರಮುಖ್ ಮಡಿಯನೂರು ಜಯಲಕ್ಷ$್ಮಮ್ಮ, ಶಿವಕೇಶವನಗರದ ಪ್ರೇಮಮ್ಮ, ಸಂಗಸಂದ್ರ ಗ್ರಾಮ ಸಮಿತಿ ಮುಖಂಡರಾದ ಆರ್.ಶ್ರೀಧರ್, ಶ್ರೀನಿವಾಸ್, ಬಾಬಾಜಾನ್, ಚಂದ್ರ, ಶಿವ, ನಾರಾಯಣಸ್ವಾಮಿ, ನೀರುಗಂಟಿ ಮುನೆಯ್ಯ, ಭಜರಂಗಿ ಚಲಪತಿ ಇದ್ದರು.